ADVERTISEMENT

Video ನೋಡಿ: ಅವಳಿ ಮರಿಗಳಿಗೆ ಜನ್ಮ ನೀಡಿದ ಕೀನ್ಯಾದ ಆಫ್ರಿಕಾ ಆನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 16:27 IST
Last Updated 23 ಜನವರಿ 2022, 16:27 IST
   

ಬೆಂಗಳೂರು: ತೀರಾ ಅಪರೂಪಕ್ಕೆ ಎಂಬಂತೆ ಆನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿರುವ ಘಟನೆ ಕೀನ್ಯಾದ ಸಂಬೂರು ನ್ಯಾಷನಲ್ ಪಾರ್ಕ್‌ನಲ್ಲಿ ನಡೆದಿದೆ.

ಬೊರಾ ಎಂಬ ಆಫ್ರಿಕಾ ಆನೆ ಇತ್ತೀಚೆಗೆ ಎರಡು ಮುದ್ದಾದ ಅವಳಿ ಮರಿಗಳಿಗೆ ಜನ್ಮ ನೀಡಿದೆ ಎಂದು ಕೀನ್ಯಾದ ವನ್ಯಜೀವಿ ಇಲಾಖೆ ಟ್ವಿಟರ್‌ನಲ್ಲಿ ವಿಡಿಯೊ ಜೊತೆ ಮಾಹಿತಿ ಹಂಚಿಕೊಂಡಿದೆ.

2006 ರಲ್ಲಿ ಕೀನ್ಯಾದಲ್ಲಿ ಒಂದು ಆನೆ ಅವಳಿ ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಆ ಮರಿಗಳು ಮರಣ ಹೊಂದಿದ್ದವು ಎನ್ನಲಾಗಿದೆ. ಈಗಿನ ಬೊರಾ ಮರಿಗಳನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

ADVERTISEMENT

ಆನೆ ಅವಳಿ ಮರಿಗಳಿಗೆ ಜನ್ಮ ನೀಡುವುದು ತೀರಾ ಅಪರೂಪ. ಇನ್ನು ಕೀನ್ಯಾದಲ್ಲಿ ವನ್ಯಜೀವಿ ಇಲಾಖೆ ಪರಿಶ್ರಮದಿಂದ ಆನೆಗಳ ಸಂತತಿ ರಕ್ಷಣೆ ಆಗುತ್ತಿದ್ದು, 2018 ಕ್ಕೆ ಹೋಲಿಸಿದರೆ (16,000) 2020 ರಲ್ಲಿ ಆನೆಗಳ ಸಂಖ್ಯೆ ದ್ವಿಗುಣ (34,000) ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.