ADVERTISEMENT

ಬಾಂಗ್ಲಾದೇಶ: ಭಾರಿ ಮಳೆ, 20 ಲಕ್ಷ ಜನರು ಅತಂತ್ರ

ಏಜೆನ್ಸೀಸ್
Published 21 ಮೇ 2022, 19:59 IST
Last Updated 21 ಮೇ 2022, 19:59 IST
ಧಾರಾಕಾರ ಮಳೆಯಿಂದಾಗಿ ಬಾಂಗ್ಲಾದೇಶದ ಬೀನಿಬಜಾರ್‌ ವ್ಯಾಪ್ತಿಯಲ್ಲಿ ಸಾವಿರಾರು ಮನೆಗಳು ಜಲಾವೃತಗೊಂಡಿವೆ –ಎಎಫ್‌ಪಿ ಚಿತ್ರ
ಧಾರಾಕಾರ ಮಳೆಯಿಂದಾಗಿ ಬಾಂಗ್ಲಾದೇಶದ ಬೀನಿಬಜಾರ್‌ ವ್ಯಾಪ್ತಿಯಲ್ಲಿ ಸಾವಿರಾರು ಮನೆಗಳು ಜಲಾವೃತಗೊಂಡಿವೆ –ಎಎಫ್‌ಪಿ ಚಿತ್ರ   

ಸಿಲ್ಹೆಟ್‌, ಬಾಂಗ್ಲಾದೇಶ: ಧಾರಾಕಾರ ಮಳೆಯಿಂದಾಗಿ ಬಾಂಗ್ಲಾದೇಶದಲ್ಲಿ ಹಲವು ನದಿಗಳು ಉಕ್ಕಿ ಹರಿದಿವೆ. ಪ್ರವಾಹ ಸ್ಥಿತಿಯಿಂದಾಗಿ 20 ಲಕ್ಷ ಜನ ಸಂತ್ರಸ್ತರಾಗಿದ್ದಾರೆ. ಕಳೆದ ಎರಡು ದಶಕಗಳಲ್ಲಿಯೇ ಗಂಭೀರ ಸ್ಥಿತಿಗೆ ಬಾಂಗ್ಲಾ ಎದುರಾಗಿದೆ.

ಬಾರಾಕ್‌ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಏರಿದೆ. ಝಕಿಗಾನಿ ವ್ಯಾಪ್ತಿಯಲ್ಲಿ ಸುಮಾರು 100 ಗ್ರಾಮಗಳು ಜಲಾವೃತಗೊಂಡಿವೆ ಎಂದು ಸಿಲ್ಹೆಟ್ ವಲಯದ ಸರ್ಕಾರದ ಮುಖ್ಯ ಆಡಳಿತಗಾರ ಮೊಶರ್ರಫ್ ಹೊಸೈನ್‌ ತಿಳಿಸಿದ್ದಾರೆ.

ಸುಮಾರು 20 ಲಕ್ಷ ಜನ ಅತಂತ್ರರಾಗಿದ್ದಾರೆ. ಪ್ರವಾಹ ಸಂಬಂಧಿತ ಅವಘಡಗಳಿಂದಾಗಿ ಈ ವಾರ ಸುಮಾರು 10 ಮಂದಿ ಮೃತಪಟ್ಟಿದ್ದಾರೆ. ಹಲವು ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿಯು ಎದುರಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಸಿಲ್ಹೆಟ್‌ ನಗರದಲ್ಲಿ ವಿದ್ಯುತ್‌ ವ್ಯತ್ಯಯವಾಗಿದೆ. ಸುಮಾರು 50 ಸಾವಿರ ಕುಟುಂಬಗಳು ಬಾಧಿತವಾಗಿವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.