ADVERTISEMENT

ಪರಿವಾರದಲ್ಲಿ ಕೋವಿಡ್ ಪತ್ತೆ: ತಜಕಿಸ್ತಾನಕ್ಕೆ ತೆರಳದಿರಲು ಪುಟಿನ್ ನಿರ್ಧಾರ

ರಾಯಿಟರ್ಸ್
Published 14 ಸೆಪ್ಟೆಂಬರ್ 2021, 10:15 IST
Last Updated 14 ಸೆಪ್ಟೆಂಬರ್ 2021, 10:15 IST
ವ್ಲಾಡಿಮಿರ್
ವ್ಲಾಡಿಮಿರ್    

ಮಾಸ್ಕೋ: ತಮ್ಮ ಪರಿವಾರದಲ್ಲಿ ಕೊರೊನಾ ವೈರಸ್‌ನ ಹೊಸ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರತ್ಯೇಕವಾಗಿರಲು ನಿರ್ಧರಿಸಿದ್ದಾರೆ.

ಹಾಗಾಗಿ, ಪ್ರಾದೇಶಿಕ ಭದ್ರತಾ ಸಭೆಗಳಿಗಾಗಿ ಈ ವಾರ ಪುಟಿನ್, ತಜಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಈಗಾಗಲೇ ರಷ್ಯಾ, ತಜಕಿಸ್ತಾನಕ್ಕೆ 12 ಶಸ್ತ್ರಸಜ್ಜಿತ ವಾಹನಗಳು ಮತ್ತು ಸೇನಾ ಉಪಕರಣಗಳನ್ನು ಕಳುಹಿಸಿದೆ.

ADVERTISEMENT

ಅಫ್ಗಾನಿಸ್ತಾನದ ಜೊತೆ ಗಡಿ ಹಂಚಿಕೊಂಡಿರುವ ತಜಕಿಸ್ತಾನದ ಜೊತೆ ಸಂಬಂಧ ಗಟ್ಟಿ ಮಾಡಿಕೊಳ್ಳಲು ರಷ್ಯಾ ಯತ್ನಿಸಿದೆ. ಅಲ್ಲದೇ, ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಪ್ರಾಬಲ್ಯಕ್ಕೆ ಬಂದ ನಂತರ ಹಾಗೂ ಅಲ್ಲಿಂದ ಅಮೆರಿಕ ಸೇನೆ ವಾಪಸಾದ ಬಳಿಕ ತಜಕಿಸ್ತಾನದಲ್ಲಿರುವ ತನ್ನ ವಾಯುನೆಲೆಯಲ್ಲಿ ರಷ್ಯಾ ಸೇನಾ ಕಸರತ್ತು ನಡೆಸಿದೆ. ಮಧ್ಯ ಏಷ್ಯಾಕ್ಕೆ ಇಸ್ಲಾಮಿಕ್ ಉಗ್ರರು ಒಳನುಸುಳುವ ಸಾಧ್ಯತೆಗಳ ಬಗ್ಗೆ ರಷ್ಯಾ ಆತಂಕದಲ್ಲಿದೆ.

‘ತಜಕಿಸ್ತಾನದ ಗಡಿಯಲ್ಲಿ ಉಲ್ಬಣಿಸುತ್ತಿರುವ ಅಸ್ಥಿರತೆಯ ಹಿನ್ನೆಲೆಯಲ್ಲಿ, ನಮ್ಮ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ಮೇಜರ್ ಜನರಲ್ ಯೆವ್ಗೆನಿ ಸಿಂಡ್ಯಾಯ್ಕಿನ್ ಶನಿವಾರ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.