ಭಾರತ್ ಬಂದ್, ಪ್ರತಿಭಟನೆ ನಂತರವೂ ದೇಶದಲ್ಲಿ ತೈಲ ಬೆಲೆ ಏರಿಕೆ 

ನವದೆಹಲಿ: ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ, ಬಂದ್ ಮುಗಿದ ನಂತರವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದೆ. ತೈಲ ಕಂಪನಿಗಳು ಸೋಮವಾರ ಪೆಟ್ರೋಲ್‍ಗೆ 23 ಪೈಸೆ ಮತ್ತು ಡೀಸೆಲ್‍ಗೆ 22 ಪೈಸೆ ಏರಿಕೆ ಮಾಡಿದ್ದವು.

ಮುಂಬೈನಲ್ಲಿ ಪೆಟ್ರೋಲ್ ಲೀಟರ್‌ಗೆ ₹ 88.12 ಪೈಸೆ ಮತ್ತು ಡೀಸೆಲ್‌‍ಗೆ ₹ 77.32 ಪೈಸೆ ಆಗಿದೆ. ಅದೇ ವೇಳೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ₹80.73 ಪೈಸೆ ಮತ್ತು ಡೀಸೆಲ್ ಬೆಲೆ ₹ 72.83 ಆಗಿದೆ.

ಮಹಾರಾಷ್ಟ್ರದ ಪರ್ಬಾನಿ ನಗರದಲ್ಲಿ ಮಂಗಳವಾರ ಪೆಟ್ರೋಲ್ ಬೆಲೆ ₹90.05 ಆಗಿದೆ, ಪೆಟ್ರೋಲ್ ಮತ್ತು ಡೀಸೆಲ್‍ಗೆ ಅತೀ ಹೆಚ್ಚು ತೆರಿಗೆ ವಿಧಿಸುವ ರಾಜ್ಯವಾಗಿದೆ ಮಹಾರಾಷ್ಟ್ರ.
ಅಂದ ಹಾಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮೇಲೆ ರಾಜ್ಯ ಸರ್ಕಾರ ವಿಧಿಸುವ ತೆರಿಗೆಯಲ್ಲಿ ಇಳಿಕೆ ಮಾಡಲು ಆಂಧ್ರ ಪ್ರದೇಶ ಸರ್ಕಾರ ಚಿಂತಿಸಿದೆ. ಹಾಗಾದರೆ ಆಂಧ್ರ ಪ್ರದೇಶದಲ್ಲಿ ತೈಲ ಬೆಲೆ ಲೀಟರ್‌‍ಗೆ ₹2ರಷ್ಟು ಕಡಿಮೆ ಆಗಲಿದೆ.

 

ಮೂರು ವಾರಗಳಲ್ಲಿ ಪೆಟ್ರೋಲ್‍ ಲೀಟರ್‌ಗೆ ₹3.35 ಮತ್ತು ಡೀಸೆಲ್‍ಗೆ ₹4.04 ಏರಿಕೆ ಆಗಿದೆ.
 

 

ಪ್ರಮುಖ ಸುದ್ದಿಗಳು