ನಾವೆಲ್ಲರೂ ಜತೆಯಾಗಿ ಅಪೌಷ್ಟಿಕತೆ, ಅಸ್ವಚ್ಛತೆಯ ವಿರುದ್ಧ ಹೋರಾಡೋಣ: ಮೋದಿ

ನವದೆಹಲಿ:  ಆಶಾ, ಎಎನ್‍ಎಂ ಮತ್ತು ಅಂಗನವಾಡಿ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದಾರೆ. ಯೂ ಟ್ಯೂಬ್ ‍ನಲ್ಲಿ ಲೈವ್ ಕಾರ್ಯಕ್ರಮ ಇದಾಗಿದ್ದು ಸಂವಾದ ಕೇಳಲು ಇಲ್ಲಿ ಕ್ಲಿಕ್ ಮಾಡಿ.

'ಪೋಷಣ್ ಮಾ' ಎಂಬ ಕಾರ್ಯಕ್ರಮದ ಅಂಗವಾಗಿ ಮೋದಿ, ಆರೋಗ್ಯ ಕಾರ್ಯಕರ್ತರೊಂದಿಗೆ ಈ ಸಂವಾದ ನಡೆಸಿದ್ದಾರೆ. ಆರೋಗ್ಯ ಮತ್ತು ಪೋಷಣೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಪೋಷಣ್ ಮಾ ಎಂಬ ಅಭಿಯಾನ ಕೈಗೊಳ್ಳಲಾಗಿದೆ.

ಸಂವಾದದಲ್ಲಿ ಮೋದಿ ಮಾತು 

ಆರೋಗ್ಯಯುತ ಭಾರತದ ನಿರ್ಮಾಣಕ್ಕಾಗಿ ನಿಮ್ಮೆಲ್ಲರ ಸಹಾಯ ಸಿಗಲಿದೆ ಎಂಬ ಭರವಸೆ ನನ್ನದು. ನಾವೆಲ್ಲರೂ ಜತೆಯಾಗಿ ಅಪೌಷ್ಟಿಕತೆ ,ಅಸ್ವಚ್ಛತೆಯ ವಿರುದ್ಧ, ಅಮ್ಮಂದಿರ ಸಮಸ್ಯೆಗಳ ವಿರುದ್ಧ ಹೋರಾಡಿ ಗೆಲ್ಲೋಣ. ಹಾಗಾದರೆ ಮಾತ್ರ ಟ್ರಿಪಲ್ ಎಯ ಈ ತಾಕತ್ತು ನಮ್ಮ ದೇಶವನ್ನು  ಎ ಗ್ರೇಡ್ ನತ್ತ ಕೊಂಡೊಯ್ಯಬಲ್ಲದು.

 • ಹರ್ಯಾಣದ ಕರ್ನಾಲ್‍ನ ಕರಿಷ್ಮಾ ಎಂಬ ಮಗು ಆಯುಷ್ಮಾನ್ ಭಾರತ್ ಯೋಜನೆಯ ಮೊದಲ ಫಲಾನುಭವಿಯಾಗಿದೆ. ಆರೋಗ್ಯ ವಲಯಕ್ಕೆ ಭಾರತ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ
   
 • ತಂತ್ರಜ್ಞಾನ ಹಲವಾರು ಅಡಚಣೆಗಳನ್ನು ದೂರಮಾಡಿದೆ. ತಂತ್ರಜ್ಞಾನ ನಮ್ಮ ಜೀವನದಲ್ಲಿ ಮುಖ್ಯ ಪಾತ್ರವನ್ನು ವಹಿಸಿದೆ. ಸರ್ಕಾರ ಈಗಾಗಲೇ ಜನರಿಗೆ ಫೋನ್ ಮೂಲಕ ಹಲವಾರು ಸೌಲಭ್ಯಗಳನ್ನು ನೀಡಿದೆ.
 • ದೇಶದ ಜನರಿಗೆ ಉತ್ತಮ ಮತ್ತು ಪೋಷಕಾಂಶಯುಕ್ತ ಊಟ ಸಿಕ್ಕಿದರೆ ದೇಶದ ಅಭಿವೃದ್ಧಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮಗು ಹುಟ್ಟಿದ ಮೊದಲ ಸಾವಿರ ದಿನಗಳು ತುಂಬಾ ಪ್ರಧಾನ ದಿನಗಳಾಗಿವೆ. ಈ ಅವಧಿಯಲ್ಲಿ ಸಿಗುವ ಆಹಾರ, ಮಗುವಿನ ಬೆಳವಣಿಯನ್ನು ನಿರ್ಧರಿಸುತ್ತದೆ.
 • ದುರ್ಬಲ ಅಡಿಪಾಯದ ಮೇಲೆ ಸುದೃಢ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ, ಅದೇ ರೀತಿ ಮಕ್ಕಳು ದುರ್ಬಲ ಮತ್ತು ರೋಗ ಬಾಧಿತರಾಗಿದ್ದರೆ ದೇಶದ ಅಭಿವೃದ್ಧಿಯಾಗಲಾರದು
   

ಉತ್ತರಪ್ರದೇಶದ ಗಾಯತ್ರಿ ದರಾಪುರಿ ಅವರ ಉತ್ತಮ ಕೆಲಸವನ್ನು ಮೋದಿ ಅಭಿನಂದಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತರೊಂದಿಗೆ ಸೇರಿ ಇಲ್ಲಿ ಷೌಷ್ಟಿಕ ಆಹಾರ ಮೇಳ ಆಯೋಜಿಸಲಾಗುತ್ತಿದೆ. ಈ ಮೇಳದಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳನ್ನು ನಡೆಸಲಾಗುತ್ತಿದೆ
 

 • ಸಾಮಾನ್ಯವಾಗಿ ಮಗು ಹುಟ್ಟಿದ  42 ದಿನಗಳಲ್ಲಿ ಆಶಾ ಕಾರ್ಯಕರ್ತೆಯರು ಆ ಮಗುವನ್ನು 6 ಬಾರಿ ಭೇಟಿಯಾಗುತ್ತಾರೆ. ಇದನ್ನು ಈಗ 15 ತಿಂಗಳ ವರೆಗೆ ವಿಸ್ತರಣೆ ಮಾಡಲಾಗಿದೆ. 15 ತಿಂಗಳಲ್ಲಿ ಆಶಾ ಕಾರ್ಯಕರ್ತೆಯರು ಮಗುವನ್ನು 11 ಬಾರಿ ಭೇಟಿಯಾಗುತ್ತಾರೆ.
 • ರಾಷ್ಟ್ರೀಯ ಪೌಷ್ಟಿಕಾಹಾರ ಯೋಜನೆಯ ಅಂಗವಾಗಿ ಅನೇಮಿಯಾ (ದೇಹದಲ್ಲಿ ಹಿಮೋಗ್ಲೋಬಿನ್​ ಮಟ್ಟ ಕಡಿಮೆಯಾಗುವುದರ ಜತೆಗೆ ರಕ್ತಕಣಗಳ ಸಂಖ್ಯೆಯೂ ಕಡಿಮೆಯಾಗುತ್ತ ಹೋಗುತ್ತದೆ )  ಮುಕ್ತ ಭಾರತವನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.
 • ಶುಲ್ಕ  ಸ್ವೀಕರಿಸದೆ ಗರ್ಭಿಣಿಯರಿಗೆ ಚಿಕಿತ್ಸೆ ನೀಡುತ್ತಿರುವ ಸಾವಿರಾರು ವೈದ್ಯರಿಗೆ ಧನ್ಯವಾದಗಳು. 
 • ಜಾರ್ಖಂಡ್‍ನ ಸರೈಕೆಲಾದಿಂದ ಅಂಗನವಾಡಿ ಕಾರ್ಯಕರ್ತೆಯಾದ ಮನಿತಾ ದೇವಿ ನವಜಾತ ಶಿಶುವೊಂದನ್ನು  ಯಾವ ರೀತಿ ರಕ್ಷಿಸಿದೆ ಎಂದು ವಿವರಿಸಿದ್ದಾರೆ.
 • ರಾಜಸ್ತಾನದ ಜುಂಜುನು ಎಂಬಲ್ಲಿ ಪೋಷಣ್ ಅಭಿಯಾನ್ ಆರಂಭಗೊಂಡಿದೆ. ಈ ಅಭಿಯಾನದಲ್ಲಿ ಅತೀ ಹೆಚ್ಚು ಮಹಿಳೆ ಮತ್ತು ಮಕ್ಕಳನ್ನು ಭಾಗಿಯಾಗುವಂತೆ ಮಾಡಲಾಗಿದೆ. 
 • ಪೋಷಣೆ ಮತ್ತು ಉತ್ತಮ ಆರೋಗ್ಯ ರಕ್ಷಣೆ ಬಗ್ಗೆ ಸರ್ಕಾರ ಗಮನ ನೀಡುತ್ತಿದೆ. ಲಸಿಕೆ ಹಾಕಿಸುವ ಪ್ರಕ್ರಿಯೆಗಳು ಉತ್ತಮವಾಗಿ ನಡೆಯುತ್ತಿವೆ. ಇದು ಮಹಿಳೆ ಮತ್ತು ಮಕ್ಕಳ ಆರೋಗ್ಯಕ್ಕೆ ಸಹಾಯ ಮಾಡುತ್ತದೆ 
 • ನಿಮ್ಮ ಜತೆ ಸಂವಹನ ನಡೆಸಲು ನನಗೆ ಖುಷಿಯಾಗುತ್ತಿತ್ತು, ದೇಶದ ಅಭಿವೃದ್ದಿಯಲ್ಲಿ ನೀವು ಮಹತ್ತರ ಪಾತ್ರ ವಹಿಸುತ್ತಿದ್ದೀರಿ.


 

ಪ್ರಮುಖ ಸುದ್ದಿಗಳು