ಪಾಪಿನಾಯಕನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ರಾಜೀನಾಮೆ

ಹೊಸಪೇಟೆ: ತಾಲ್ಲೂಕಿನ ಪಾಪಿನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭೀಮಕ್ಕ ನಾಯಕರ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

ನಗರಕ್ಕೆ ಬಂದು, ಉಪವಿಭಾಗಾಧಿಕಾರಿ ಎನ್‌. ಲೋಕೇಶ್‌ ಅವರಿಗೆ ರಾಜೀನಾಮೆ ಪತ್ರ ನೀಡಿದರು. ‘ಆರೋಗ್ಯ ಸಂಬಂಧಿ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದೇನೆ. ಹಣದ ಆಮಿಷ ಅಥವಾ ಯಾರದೋ ಭಯದಿಂದ ರಾಜೀನಾಮೆ ನೀಡಿಲ್ಲ. ಸ್ವ ಇಚ್ಛೆಯಿಂದ ನನ್ನ ಸ್ಥಾನ ತ್ಯಜಿಸುತ್ತಿದ್ದೇನೆ. ಇಷ್ಟು ದಿನ ಕೆಲಸ ನಿರ್ವಹಿಸಲು ಸಹಕರಿಸಿದ ಎಲ್ಲ ಸದಸ್ಯರು ಹಾಗೂ ಸಿಬ್ಬಂದಿ ವರ್ಗಕ್ಕೆ ಕೃತಜ್ಞಳಾಗಿದ್ದೇನೆ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಭೀಮಕ್ಕ ಅವರು 2015ರ ಜೂ. 27ರಂದು ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದರು.

ಪ್ರಮುಖ ಸುದ್ದಿಗಳು