ಯುಪಿಎಸ್‍ಸಿ ವೆಬ್‌ಸೈಟ್ ಹ್ಯಾಕ್ ಮಾಡಿ ಡೊರೇಮಾನ್ ಚಿತ್ರ ಪ್ರಕಟ! 

ನವದೆಹಲಿ: ಲೋಕಸೇವಾ ಆಯೋಗ (ಯುಪಿಎಸ್‌ಸಿ) ವೆಬ್‌ಸೈಟ್‍  ಸೋಮವಾರ ರಾತ್ರಿ ಹ್ಯಾಕ್‌ ಆಗಿದೆ. ವೆಬ್‍ಸೈಟ್ ತೆರೆದಾಗ ಕಾರ್ಟೂನ್ ಕಥಾಪಾತ್ರವಾದ ಡೊರೇಮಾನ್ ಚಿತ್ರ ಕಾಣಿಸುತ್ತಿದ್ದು, ಹಿನ್ನೆಲೆಯಲ್ಲಿ ಕಾರ್ಟೂನ್ ಶೀರ್ಷಿಕೆ ಗೀತೆ ಕೇಳಿ ಬಂದಿದೆ.

ಯುಪಿಎಸ್‍ಸಿ ವೆಬ್‍ಸೈಟ್‍ಗೆ ಭೇಟಿ ನೀಡಿದವರು ಸ್ಕ್ರೀನ್ ಶಾಟ್ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ ನಂತರವೇ ಹ್ಯಾಕ್ ಆಗಿರುವ ಸಂಗತಿ ಗಮನಕ್ಕೆ ಬಂದಿದೆ. 

ವೆಬ್‍ಸೈಟ್ ತೆರೆದಾಗ ಡೊರೇಮಾನ್ ಚಿತ್ರದೊಂದಿಗೆ 'Doraemon- Pick up the call' ಎಂಬ ವಾಕ್ಯ ಡಿಸ್‌‍ಪ್ಲೇ ಆಗಿದೆ. ಆನಂತರ ಡೊರೇಮಾನ್ ಹಿಂದಿ ಅವತರಣಿಕೆಯ ಶೀರ್ಷಿಕೆ ಗೀತೆಯೂ ಕೇಳಿ ಬಂದಿತ್ತು. ಈ ಬಗ್ಗೆ ರಿಪೋರ್ಟ್ ಮಾಡಲು ನೋಡಿದರೆ The website is under maintenance ಎಂದು ತೋರಿಸಿತ್ತು.

ಹ್ಯಾಕ್ ಆಗಿರುವ ಸಂಗತಿ ಸುದ್ದಿಯಾಗುತ್ತಿದ್ದಂತೆ ವೆಬ್‍ಸೈಟ್‍ನ್ನು ಸರಿಪಡಿಸಲಾಗಿದೆ.
 

ಪ್ರಮುಖ ಸುದ್ದಿಗಳು