20 ವರ್ಷಗಳ ನಂತರ ಅಪರಾಧಿ ಬಂಧನ

ಚೆನ್ನೈ (ಪಿಟಿಐ): 1998ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 20 ವರ್ಷಗಳ ಹಿಂದೆ ತಪ್ಪಿಸಿಕೊಂಡಿದ್ದ ಅಪರಾಧಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. 

20 ವರ್ಷಗಳ ಹಿಂದೆ ಕಾಣೆಯಾಗಿದ್ದ ಎನ್.ಪಿ. ನೂಹು ಅಲಿಯಾಸ್‌ ಮಂಕಾವು ರಶೀದ್‌ನನ್ನು ಕೇರಳದ ಕೊಯಿಕ್ಕೋಡ್‌ನಲ್ಲಿ  ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. 

ಸ್ಫೋಟದಲ್ಲಿ 58 ಜನ ಸಾವಿಗೀಡಾಗಿದ್ದರೆ, 200 ಜನ ಗಾಯಗೊಂಡಿದ್ದರು. ಪ್ರಕರಣದಲ್ಲಿ ನೂಹು ಅಪರಾಧಿ ಎಂದು ನ್ಯಾಯಾಲಯ ಘೋಷಿಸಿತ್ತು.

ಪ್ರಮುಖ ಸುದ್ದಿಗಳು