16ರಿಂದ ಸಹಕಾರ ಸೊಸೈಟಿಗಳಿಂದ ‘ಗಣೇಶೋತ್ಸವ’

ಬೆಳಗಾವಿ: ಇಲ್ಲಿನ ನಾಲ್ಕು ಸಹಕಾರ ಸೊಸೈಟಿಗಳ ವತಿಯಿಂದ ಕಿರ್ಲೋಸ್ಕರ್‌ ರಸ್ತೆಯ ವಾಜ್ಞಯ ಚರ್ಚಾ ಮಂಡಳ ಸಭಾಂಗಣದಲ್ಲಿ ಸೆ. 16ರಿಂದ 20ರವರೆಗೆ ನಿತ್ಯ ಸಂಜೆ 4ಕ್ಕೆ ಗಣೇಶೋತ್ಸವ ಆಯೋಜಿಸಲಾಗಿದೆ ಎಂದು ಶ್ರೀಮಾತಾ ಕೋ–ಆ‍ಪ್ ಕ್ರೆಡಿಟ್‌ ಸೊಸೈಟಿ ಅಧ್ಯಕ್ಷ ಮನೋಹರ ದೇಸಾಯಿ ತಿಳಿಸಿದರು.

‘ಭಕ್ತಿ ಮಹಿಳಾ, ರಾಜಮಾತಾ ಮಹಿಳಾ, ಶ್ರೀಮಾತಾ ಕೋ–ಆ‍ಪ್ ಕ್ರೆಡಿಟ್‌ ಹಾಗೂ ಸಿಟಿ ಕೋ–ಆಪ್‌ ಸೊಸೈಟಿ ಸಹಯೋಗದಲ್ಲಿ ಸಾಂಸ್ಕೃತಿಕ ಹಾಗೂ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುವುದು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘16ರಂದು ಸಂಜೆ 4ಕ್ಕೆ ಉದ್ಘಾಟನೆ ನೆರವೇರಲಿದೆ. ಸಹಕಾರಿಗಳಾದ ಆರ್.ಎಸ್. ಪಾಟೀಲ, ಎಸ್‌.ಜಿ. ಬಾಳೇಕುಂದ್ರಿ, ಜ್ಯೋತಿ ಎಸ್. ಅಗರವಾಲ್‌, ಮನೋರಮಾ ಎಂ. ದೇಸಾಯಿ ಮುಖ್ಯಅತಿಥಿಗಳಾಗಿ ಭಾಗವಹಿಸುವರು. ನಂತರ, ಅಕಾಡೆಮಿ ಅಫ್‌ ಮ್ಯೂಸಿಕ್‌ನ ರೋಹಿಣಿ ಕುಲಕರ್ಣಿ ಹಾಗೂ ತಂಡದವರು ‘ಭಕ್ತಿಧಾರಾ’ ಭಕ್ತಿಗೀತೆಗಳ ಕಾರ್ಯಕ್ರಮ, 17ರಂದು ಹಾಸ್ಯ ಪ್ರಸಂಗಗಳನ್ನು ಸಾಂಗ್ಲಿಯ ಹಿಮತ್‌ ಪಾಟೀಲ ಪ್ರಸ್ತುತಪಡಿಸುವರು’ ಎಂದು ಮಾಹಿತಿ ನೀಡಿದರು.

‘18ರಂದು ಹಿಂದಿ ಹಾಗೂ ಮರಾಠಿ ಗೀತೆಗಳ ಗಾಯನ ‘ಸ್ವರ ಝೇಂಕಾರ’ ನಡೆಯಲಿದೆ. 19ರಂದು ಚಲನಚಿತ್ರ ನಟ, ಕೊಲ್ಲಾಪುರದ ನಿತಿನ್ ಕುಲಕರ್ಣಿ ಹಾಸ್ಯ ಕಾರ್ಯಕ್ರಮ ಪ್ರಸ್ತುತಪಡಿಸುವರು. 20ರಂದು ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ಸೀತವ್ವ ಜೋಡಟ್ಟಿ (ಸಮಾಜ ಸೇವಾ ರತ್ನ), ಎಲ್.ಎಸ್. ಶಾಸ್ತ್ರಿ (ಸಾಹಿತ್ಯ ರತ್ನ), ಮಾಧವ ಕುಂಟೆ (ನಾಟ್ಯಭೂಷಣ), ವಿಕ್ಟರ್ ಫ್ರಾನ್ಸಿಸ್ (ಸಂಗೀತ ರತ್ನ), ದಿಲೀಪ ಚಾಂಡಕ (ಉದ್ಯೋಗ ರತ್ನ), ಶೀತಲ್ ದಿನೇಶ ಕೊಲ್ಲಾಪುರೆ (ಕ್ರೀಡಾ ರತ್ನ), ವಿಠ್ಠಲ ಪೊಂಡೋ ಪಾಟೀಲ (ಶ್ರಮ ಸೇವಾ ರತ್ನ), ಬಾಳಾಸಾಹೇಬ ಕದಮ್ (ಕೃಷಿ ರತ್ನ) ಅವರನ್ನು ಸತ್ಕರಿಸಲಾಗುವುದು. ಸಂಸ್ಥೆಗಳ ವಿಭಾಗದಲ್ಲಿ ಭಗವಾನ ಮಹಾವೀರ ಗೋಶಾಲೆಗೆ ಪ್ರಶಸ್ತಿ ನೀಡಲಾಗುವುದು’ ಎಂದು ವಿವರಿಸಿದರು.

ಸಹಕಾರಿಗಳಾದ ಸುಹಾಸ ಕುಲಕರ್ಣಿ, ವಿಲಾಸ ಅಧ್ಯಾಪಕ, ಸಿ.ಡಿ. ಪಾಟೀಲ ಇದ್ದರು.

 

ಪ್ರಮುಖ ಸುದ್ದಿಗಳು