ರಮೇಶ ಜಾರಕಿಹೊಳಿ ಪಕ್ಷಕ್ಕೆ ಹಾನಿ ಮಾಡಲ್ಲ: ಮಲ್ಲಿಕಾರ್ಜುನ ಖರ್ಗೆ

ಕಲಬುರ್ಗಿ: ‘ಸಚಿವ ರಮೇಶ ಜಾರಕಿಹೊಳಿ ಯಾವುದೇ ಕಾರಣಕ್ಕೂ ಪಕ್ಷಕ್ಕೆ ಹಾನಿ ಮಾಡುವುದಿಲ್ಲ. ಭಿನ್ನಾಭಿಪ್ರಾಯವಿದ್ದರೆ ರಮೇಶ ಮತ್ತು ಸತೀಶ ಜಾರಕಿಹೊಳಿ ಜತೆ ಮಾತನಾಡುತ್ತೇನೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇವೇಂದ್ರ ಫಡಣವೀಸ್, ಅಮಿತ್ ಷಾ ಯಾರೇ ನಮ್ಮ ರಾಜ್ಯಕ್ಕೆ ಬಂದರೂ ಇಲ್ಲಿಯ ಜನರು ಅವರಿಗೆ ಮಣೆ ಹಾಕುವುದಿಲ್ಲ. ಕನ್ನಡಿಗರು ಸಮರ್ಥರಿದ್ದಾರೆ. ಅವರಿಗೆ ಇಲ್ಲಿ ಕಾಲಿಡಲು ಅವಕಾಶ ನೀಡುವುದಿಲ್ಲ’ ಎಂದರು.

ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಶಾಸಕರ ಸಭೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಖರ್ಗೆ, ‘ಯಡಿಯೂರಪ್ಪ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು, ಶಾಸಕರ ಸಭೆ ನಡೆಸಿದ್ದಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು, ಯಾವುದೇ ಒಡಕಿಲ್ಲ’ ಎಂದು ತಿಳಿಸಿದರು.

ಪ್ರಮುಖ ಸುದ್ದಿಗಳು