ಬಾಂಗ್ಲಾದ ನಿರಾಶ್ರಿತ ಹಿಂದೂಗಳಿಗೆ ಭಾರತದ ಪೌರತ್ವ: ಅಮೆರಿಕದ ಸಂಘಟನೆ ಅಭಿಯಾನ

ವಾಷಿಂಗ್ಟನ್ (ಪಿಟಿಐ): ಬಂಗ್ಲಾದೇಶ‌ದಿಂದ ಬಂದಿರುವ ನಿರಾಶ್ರಿತ ಹಿಂದೂಗಳಿಗೆ ಭಾರತದ ಪೌರತ್ವ ನೀಡುವಂತೆ ಆಗ್ರಹಿಸಿ ಇಲ್ಲಿನ ಸಂಘಟನೆಯೊಂದು ಅಭಿಯಾನ ಆರಂಭಿಸಿದೆ. ಬಾಂಗ್ಲಾದಿಂದ ಬಂದಿರುವ ಹಿಂದೂಗಳು ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿಯಿಂದ (ಎನ್‌ಆರ್‌ಸಿ) ಹೊರಗುಳಿದಿದ್ದು, ಅವರಿಗೆ ಪೌರತ್ವ ನೀಡುವಂತೆ ಸಂಘಟನೆಯು ಭಾರತಕ್ಕೆ ಆಗ್ರಹಿಸಿದೆ. 

ಸಿಂಗಬಹಿನಿ ಅಮೆರಿಕ, ಗ್ಲೋಬಲ್ ಹಿಂದೂ ಹೆರಿಟೇಜ್ ಫೌಂಡೇಷನ್ ಮತ್ತು ನವಬಂಗಾ ಸಂಘಟನೆಗಳ ಬ್ಯಾನರ್‌ನಡಿ ಎನ್‌ಆರ್‌ಐಗಳ ತಂಡವೊಂದು ಈ ಅಭಿಯಾನ ನಡೆಸುತ್ತಿದೆ. 1955ರ ಪೌರತ್ವ ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶದಿಂದ ‘ಪೌರತ್ವ ಮಸೂದೆ–2016’ಕ್ಕೆ ಬೆಂಬಲ ನೀಡುವಂತೆ ಕೋರಿದೆ. 

ಈ ಸಂಬಂಧ ಇತ್ತೀಚೆಗೆ ನಡೆದ ವಿಶ್ವ ಹಿಂದೂ ಸಮಾವೇಶದಲ್ಲಿ ಭಾರತದ ಮುಖಂಡರನ್ನು ಸಂಘಟನೆ ಸದಸ್ಯರು ಭೇಟಿಯಾಗಿ ಮನವಿ ಮಾಡಿದ್ದಾರೆ. 

 

ಪ್ರಮುಖ ಸುದ್ದಿಗಳು