ಫೆರಾರಿ ತಂಡಕ್ಕೆ ಚಾರ್ಲೆಸ್‌

ಮಿಲಾನ್‌ (ರಾಯಿಟರ್ಸ್‌): ಸೌಬರ್‌ ತಂಡದ ಚಾಲಕ ಚಾರ್ಲೆಸ್‌ ಲೇಕ್ಲರ್ಕ್‌ ಅವರು 2019ರ ಋತುವಿನ ಫಾರ್ಮುಲಾ–1 ಚಾಂಪಿಯನ್‌ಷಿಪ್‌ಗಳಲ್ಲಿ ಫೆರಾರಿ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಈ ವಿಷಯವನ್ನು ಫೆರಾರಿ ಸಂಸ್ಥೆ ಮಂಗಳವಾರ ಬಹಿರಂಗಪಡಿಸಿದೆ.

ಕಿಮಿ ರಾಯಿಕ್ಕೊನೆನ್‌ ಅವರು ತಂಡ ತೊರೆಯಲು ನಿರ್ಧರಿಸಿದ್ದಾರೆ. ಹೀಗಾಗಿ ಫೆರಾರಿ ಸಂಸ್ಥೆ ಚಾರ್ಲೆಸ್‌ ಜೊತೆ ಒಪ್ಪಂದ ಮಾಡಿಕೊಂಡಿದೆ.

ರಾಯಿಕ್ಕೊನೆನ್‌ ಅವರು 2007ರಲ್ಲಿ ನಡೆದಿದ್ದ ಫಾರ್ಮುಲಾ–1 ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು.

ಮಾಂಟೆ ಕಾರ್ಲೊದಲ್ಲಿ ಜನಿಸಿದ ಚಾರ್ಲೆಸ್‌ ಅವರು 2016ರಲ್ಲಿ ನಡೆದಿದ್ದ ಜಿಪಿ–3 ಸೀರಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಟ್ರೋಫಿ ಗೆದ್ದಿದ್ದರು.

20 ವರ್ಷ ವಯಸ್ಸಿನ ಈ ಚಾಲಕ 2017ರಲ್ಲಿ ನಡೆದಿದ್ದ ಎಫ್‌ಐಎ ಫಾರ್ಮುಲಾ–2 ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು.

ಈ ವರ್ಷದ ಆರಂಭದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಗ್ರ್ಯಾನ್‌ಪ್ರೀ ಮತ್ತು ಇಟಾಲಿಯನ್‌ ಗ್ರ್ಯಾನ್‌ ಪ್ರೀ ಚಾಂಪಿಯನ್‌ಷಿಪ್‌ಗಳಲ್ಲಿ ಗಮನ ಸೆಳೆದಿದ್ದರು. 2017ರಲ್ಲಿ ವರ್ಷದ ಶ್ರೇಷ್ಠ ಚಾಲಕ ಪ್ರಶಸ್ತಿಗೆ ಭಾಜನರಾಗಿದ್ದರು.

ಪ್ರಮುಖ ಸುದ್ದಿಗಳು