ಗಾಂಜಾ ಮಾರಾಟಗಾರರ ಬಂಧನ

ಭದ್ರಾವತಿ: ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂರು ಮಂದಿಯನ್ನು ನ್ಯೂಟೌನ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮಕ್ಬುಲ್ (55), ಸದ್ದಾಂ ಹುಸೇನ್ (28) ಸಂತೋಷ್ (19) ಬಂಧಿತರು.

ನ್ಯೂಟೌನ್ ಕೂಲಿಬ್ಲಾಕ್ ಶೆಡ್ ಆಂಜನೇಯ ಅಗ್ರಹಾರದ ಮನೆಯಲ್ಲಿ ಆರೋಪಿಗಳನ್ನು ಬಂಧಿಸಿ ಸುಮಾರು ₹10ಸಾವಿರ ಮೌಲ್ಯದ ಎರಡು ಕೆ.ಜಿ. ಗಾಂಜಾ ಹಾಗೂ ₹12,240 ವಶಕ್ಕೆ ಪಡೆದಿದ್ದಾರೆ.

ಡಿವೈಎಸ್ಪಿ ಓಂಕಾರನಾಯ್ಕ, ನಗರ ವೃತ್ತ ನಿರೀಕ್ಷಕ ಚಂದ್ರಶೇಖರ್ ಮಾರ್ಗದರ್ಶನದಲ್ಲಿ ನ್ಯೂಟೌನ್ ಠಾಣೆ ಪಿಎಸ್ಐ ಪ್ರಕಾಶ್, ಸಿಬ್ಬಂದಿ ಎಂ.ಎಚ್.ಸಿ. ಸರಳಾದೇವಿ, ನಾಗರಾಜ್, ತಮ್ಮಣ್ಣ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ಈ ಪ್ರಕರಣ ಬೇಧಿಸಿದೆ.

 

ಪ್ರಮುಖ ಸುದ್ದಿಗಳು