ವಿವೇಕಾನಂದರ ಷಿಕಾಗೊ ಭಾಷಣ ಅವಿಸ್ಮರಣೀಯ: ಪ್ರಮೋದಾಮಯಿ

ಹೊಸಪೇಟೆ: ಸ್ವಾಮಿ ವಿವೇಕಾನಂದರು ಷಿಕಾಗೊದಲ್ಲಿ ಮಾಡಿದ ಭಾಷಣದ 125ನೇ ವರ್ಷಾಚರಣೆಯನ್ನು ನಗರದಲ್ಲಿ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.

ನಗರದ ಹಂಸಾಂಬ ಶಾರದಾಶ್ರಮದಲ್ಲಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾರದಾ ಆಶ್ರಮದ ಪ್ರಮೋದಾಮಯಿ, ‘ಸ್ವಾಮಿ ವಿವೇಕಾನಂದರ ದೇಶ ಪ್ರೇಮ ಪ್ರತಿಯೊಬ್ಬರಿಗೂ ಮಾದರಿ. 125 ವರ್ಷಗಳ ಹಿಂದೆ ಷಿಕಾಗೊದಲ್ಲಿ ಅವರು ಮಾಡಿದ ಭಾಷಣಕ್ಕೆ ಇಡೀ ಜಗತ್ತೇ ಮೂಕವಿಸ್ಮಿತವಾಗಿತ್ತು’ ಎಂದು ಹೇಳಿದರು.

ಡಾ. ವಿನಾಯಕ, ಡಾ.ಶ್ರೀನಿವಾಸ ದೇಶಪಾಂಡೆ, ಕಲ್ಲಂಭಟ್, ಸಿದ್ಧಾರ್ಥ ಆನಂದ ಸಿಂಗ್ ಇದ್ದರು.

ರಾಮಕೃಷ್ಣ ಗೀತಾಶ್ರಮ:

ಬೆಳಿಗ್ಗೆ ಅಲಂಕರಿಸಿದ ಸಾರೋಟಿನಲ್ಲಿ ವಿವೇಕಾನಂದರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ ನಡೆದ ಕಾರ್ಯಕ್ರಮದಲ್ಲಿ ನೀಲಾ ಮಲ್ಲಿಕಾರ್ಜುನ ಮಾತನಾಡಿ, ‘ವಿವೇಕಾನಂದರ ತ್ಯಾಗ, ಸೇವಾ ಮನೋಭಾವ, ಹೃದಯ ವೈಶಾಲ್ಯತೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಆಗ ಎಲ್ಲರೂ ಸಹೋದರರಂತೆ ಬದುಕಲು ಸಾಧ್ಯ’ ಎಂದರು.

ನಂದಿಪುರದ ಮಹೇಶ್ವರ ಸ್ವಾಮಿ, ಸುಮೇಧಾನಂದ ಜೀ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಸಂದೀಪ್ ಸಿಂಗ್, ಪತ್ತಿಕೊಂಡ ಪ್ರಭಾಕರ್, ಕಮಲಾ ಗುಮಾಸ್ತೆ, ಗೋವರ್ಧನ, ಬಸವರಾಜ ನಾಲತ್ವಾಡ, ಕಟ್ಟನಂಜಪ್ಪ, ಶ್ರೀನಿವಾಸ್ ರಾವ್ ಇದ್ದರು.

 

 

ಪ್ರಮುಖ ಸುದ್ದಿಗಳು