ಶಿರಾ: ದೇಗುಲದಿಂದ ಮರಳುವ ವೇಳೆ ಸಿಡಿಲು ಬಡಿದು ಯುವಕ ಸಾವು

ಶಿರಾ: ತಾಲ್ಲೂಕಿನ ದ್ವಾರಾಳು ಗೇಟ್ ಬಳಿಯ ಉಡಸಲಮ್ಮ ದೇವಸ್ಥಾನದ ಹತ್ತಿರ ಮಂಗಳವಾರ ಸಂಜೆ ಸಿಡಿಲು ಬಡಿದು ನವೀನ್ (22) ಮೃತಪಟ್ಟಿದ್ದಾನೆ.

ಈತ ತೊಗರಗುಂಟ ಗ್ರಾಮದ ಯುವಕ. ಸಂಜೆ ದೇವಸ್ಥಾನದೊಳಗೆ ಪೂಜೆ ಮುಗಿಸಿಕೊಂಡು ಬರುತ್ತಿದ್ದಾಗ ಸಿಡಿಲು ಬಡಿದು ತೀವ್ರ ಗಾಯಗೊಂಡಿದ್ದ. ಶಿರಾ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ತಂದಾಗ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಮುಖ ಸುದ್ದಿಗಳು