ರೂಪಾಯಿ ಮೌಲ್ಯ 72.69ಕ್ಕೆ ಕುಸಿತ

ಮುಂಬೈ: ಡಾಲರ್‌ ಎದುರಿನ ರೂಪಾಯಿ ವಿನಿಮಯ ದರದ ಕುಸಿತ ಮಂಗಳವಾರವೂ ಮುಂದುವರೆದಿದ್ದು, ದಾಖಲೆ ಮಟ್ಟವಾದ 72.69ಕ್ಕೆ ಇಳಿದಿದೆ.

ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ 78 ಡಾಲರ್‌ ದಾಟಿದೆ. ಇನ್ನೊಂದೆಡೆ ಅಮೆರಿಕದ ಕರೆನ್ಸಿಯು, ವಿಶ್ವದ ಇತರ ಕರೆನ್ಸಿಗಳ ಜತೆಗಿನ ವಿನಿಮಯ ದರದಲ್ಲಿ ಇನ್ನಷ್ಟು ಏರಿಕೆ ಕಂಡಿದೆ. ರೂಪಾಯಿ, 24 ಪೈಸೆ ಕುಸಿತ ಕಂಡಿದೆ. ವಿದೇಶಿ ಬಂಡವಾಳದ ಹೊರ ಹರಿವು, ಷೇರುಪೇಟೆಯಲ್ಲಿನ ಮಾರಾಟ ಒತ್ತಡವು ರೂಪಾಯಿ ಅಪಮೌಲ್ಯ ಹೆಚ್ಚಿಸುತ್ತಿವೆ. ವಿದೇಶಿ ಹೂಡಿಕೆದಾರರು ಸೋಮವಾರದಿಂದೀಚೆಗೆ ಬಂಡವಾಳ ಪೇಟೆಯಿಂದ ₹ 2,300 ಕೋಟಿ ವಾಪಸ್‌ ಪಡೆದಿದ್ದಾರೆ.

2019ರ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದ ಅನಿಶ್ಚಿತತೆಯೂ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ನಿರುತ್ಸಾಹ ಮೂಡಿಸಿದೆ.

ಪ್ರಮುಖ ಸುದ್ದಿಗಳು