ಅಮೆರಿಕ ನಿರ್ಬಂಧ ಚಾಬಹಾರ್‌ ಮೇಲಿನ ಪರಿಣಾಮ ಚರ್ಚೆ

ನವದೆಹಲಿ: ಅಮೆರಿಕದ ಆರ್ಥಿಕ ನಿರ್ಬಂಧದಿಂದ ಚಾಬಹಾರ್ ಬಂದರು ಮೇಲಾಗುವ ಪರಿಣಾಮಗಳ ಕುರಿತು ಭಾರತ, ಇರಾನ್‌ ಮತ್ತು ಅಫ್ಗಾನಿಸ್ತಾನದ ಅಧಿಕಾರಿಗಳು ಕಾಬೂಲ್‌ನಲ್ಲಿ ಮಂಗಳವಾರ ತ್ರಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಅವರು ಅಘ್ಗಾನಿಸ್ತಾನ ಮತ್ತು ಇರಾನ್‌ ಅಧಿಕಾರಿಗಳು ಮತ್ತು ವಿದೇಶಾಂಗ ಸಚಿವರ ಜತೆ ವಾಣಿಜ್ಯ ಸಂಬಂಧ ಮತ್ತು ಸಹಕಾರ ಕುರಿತು ಮಾತುಕತೆ ನಡೆಸಿದ್ದಾರೆ. ಇರಾನ್‌ ಮತ್ತು ಭಾರತ ಜಂಟಿಯಾಗಿ ₹550 ಕೋಟಿ ವೆಚ್ಚದಲ್ಲಿ ಒಮಾನ್‌ನಲ್ಲಿ ಚಾಬಹಾರ್‌ ಬಂದರು ಅಭಿವೃದ್ಧಿಪಡಿಸಿವೆ. ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮಗಳ ಕಾರಣ ಆ ದೇಶದ ಮೇಲೆ ಅಮೆರಿಕ ನಿರ್ಬಂಧ ಹೇರಿದೆ.

ಆರ್ಥಿಕ ಸಹಕಾರ, ಭಯೋತ್ಪಾದನೆ ನಿಗ್ರಹ, ಮಾದಕ ವಸ್ತುಗಳ ವಿರುದ್ಧದ ಹೋರಾಟ, ಅಫ್ಗಾನಿಸ್ತಾನದಲ್ಲಿ ಶಾಂತಿ ಮರು ಸ್ಥಾಪನೆಗೆ ಸಹಕಾರ ನೀಡುವ ಬಗ್ಗೆ ಚರ್ಚಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಪ್ರಮುಖ ಸುದ್ದಿಗಳು