ಭಾರತ–ಅಮೆರಿಕ ಜಂಟಿ ಸಮರಾಭ್ಯಾಸ

ಡೆಹರಾಡೂನ್: ಭಾರತ ಮತ್ತು ಅಮೆರಿಕ ಸೇನೆಗಳು ಇದೇ 16ರಿಂದ ಹಿಮಾಲಯದ ಚೌಬಾಟ್ಟಿಯಾ ಪ್ರದೇಶದಲ್ಲಿ ಜಂಟಿಯಾಗಿ ಸಮರಾಭ್ಯಾಸ ನಡೆಸಲಿವೆ.

ಉಭಯ ದೇಶಗಳ ನಡುವಣ ಮಹತ್ವದ ದ್ವಿಪಕ್ಷೀಯ ರಕ್ಷಣಾ ಸಹಕಾರ ಮತ್ತು ದೀರ್ಘಾವಧಿ ಜಂಟಿ ಸೇನಾ ತರಬೇತಿ ಅಭ್ಯಾಸ ಇದಾಗಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

14ನೇ ಜಂಟಿ ಸಮರಾಭ್ಯಾಸ ಇದಾಗಿದ್ದು, ಉಭಯ ದೇಶಗಳ ತಲಾ 350 ಯೋಧರು ಪಾಲ್ಗೊಳ್ಳಲಿದ್ದಾರೆ. ಸೆಪ್ಟೆಂಬರ್‌ 29ರಂದು ಇದು ಕೊನೆಗೊಳ್ಳಲಿದೆ.

ಮುಖ್ಯವಾಗಿ ಯೋಧರಿಗೆ ಹಿಂಸಾಚಾರ ನಿಯಂತ್ರಿಸಲು ಮತ್ತು ಭಯೋತ್ಪಾದನೆ ನಿಗ್ರಹ ಕುರಿತು ತರಬೇತಿ ನೀಡಲಾಗುತ್ತಿದೆ.

ಪ್ರಮುಖ ಸುದ್ದಿಗಳು