ಬಸ್‌ ಡಿಕ್ಕಿ: ಕುರಿಗಳ ಸಾವು

ಮಲೇಬೆನ್ನೂರು: ಬ್ಯಾಲದಹಳ್ಳಿ ಸೇತುವೆ ಬಳಿ ಮಂಗಳವಾರ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ 11 ಕುರಿಗಳು ಮೃತಪಟ್ಟಿವೆ. ರಸ್ತೆಯಲ್ಲಿ 200ಕ್ಕೂ ಅಧಿಕ ಕುರಿಗಳ ಹಿಂಡು ಸಾಗುತ್ತಿತ್ತು. ಹರಿಹರದಿಂದ ತುಮ್ಮಿನಕಟ್ಟೆ ಹೋಗುತ್ತಿದ್ದ ಬಸ್‌ ಅವುಗಳ ಮೇಲೆಯೇ ಹೋಗಿದೆ.

ಬ್ಯಾಲದಹಳ್ಳಿ ನಾಗಪ್ಪ, ಚೌಡಪ್ಪ, ಹನುಮಂತಪ್ಪ ಎಂಬುವರಿಗೆ ಸೇರಿದ ಕುರಿಗಳಾಗಿವೆ. ಬಸ್‌ ತಡೆಹಿಡಿದು ಕುರಿಗಾಹಿಗಳು ಪ್ರತಿಭಟನೆ ನಡೆಸಿದ್ದಾರೆ.

ಪ್ರಮುಖ ಸುದ್ದಿಗಳು