ಗಣಪನ ಜೊತೆ ಹೂವಿನ ಸಸಿ ಉಚಿತ!

ಸಿರುಗುಪ್ಪ (ಬಳ್ಳಾರಿ ಜಿಲ್ಲೆ): ಮಣ್ಣಿನ ಗಣೇಶ ಮೂರ್ತಿಯನ್ನು ಖರೀದಿಸಿದವರಿಗೆ, ಹೂವಿನ ಸಸಿಯೊಂದನ್ನು ಉಚಿತವಾಗಿ ನೀಡುವ ಮೂಲಕ ಇಲ್ಲಿಯ ರಸ್ತೆ ಬದಿಯ ವ್ಯಾಪಾರಿಯೊಬ್ಬರು ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.

ವ್ಯಾಪಾರಿ ಜಿ. ವೀರೇಶಶೆಟ್ಟಿ ಮಣ್ಣಿನ ಮೂರ್ತಿ ಮಾಡುವವರಿಂದ ಖರೀದಿಸಿ, ನೈಸರ್ಗಿಕ ಬಣ್ಣಗಳಿಂದ ಅವುಗಳನ್ನು ಸರಳವಾಗಿ ಅಲಂಕರಿಸುವ ಅವರು, ಹೂಕುಂಡದಲ್ಲಿಯೇ ವಿಸರ್ಜಿಸಬಹುದಾದಂಥ ಗಣೇಶ ಮೂರ್ತಿಗಳನ್ನು ಮಾರುವ ಅವರು ಹೂವಿನ ಸಸಿಗಳನ್ನೂ ನೀಡುತ್ತಿದ್ದಾರೆ.

ಪ್ರಮುಖ ಸುದ್ದಿಗಳು