ತೆರಿಗೆ ಇಳಿಸಲಿ

ಪೆಟ್ರೋಲ್- ಡೀಸೆಲ್ ಬೆಲೆ ಹೆಚ್ಚುತ್ತಲೇ ಇದೆ. ‘ಬಿಜೆಪಿ ಸರ್ಕಾರದ ವೈಫಲ್ಯವೇ ಬೆಲೆ ಏರಿಕೆಗೆ ಕಾರಣ’ ಎಂದು ಕಾಂಗ್ರೆಸ್‌ ನೇತೃತ್ವದಲ್ಲಿ ಭಾರತ ಬಂದ್‌ ಮಾಡಲಾಯಿತು. ‘ಹಿಂದಿನ ಸರ್ಕಾರದ ನೀತಿಗಳೇ ಬೆಲೆ ಏರಿಕೆಗೆ ಕಾರಣ’ ಎಂದು ಬಿಜೆಪಿ ಆರೋಪಿಸುತ್ತಿದೆ. ಆರೋಪ- ಪ್ರತ್ಯಾರೋಪಗಳು ಮುಂದುವರಿಯುತ್ತಿವೆಯೇ ವಿನಾ ಬೆಲೆಗಳು ನಿಯಂತ್ರಣಕ್ಕೆ ಬರುತ್ತಿಲ್ಲ.

ಪೆಟ್ರೋಲ್‌ ಮೇಲೆ ರಾಜ್ಯ ಸರ್ಕಾರವೂ ದೊಡ್ಡ ಮೊತ್ತದ ತೆರಿಗೆ ವಿಧಿಸಿದೆ. ಈ ತೆರಿಗೆಯನ್ನು ಸ್ವಲ್ಪ ಇಳಿಸುವ ಮೂಲಕ ರಾಜ್ಯ ಸರ್ಕಾರವೇ ಜನರ ಸಂಕಷ್ಟವನ್ನು ಸ್ವಲ್ಪವಾದರೂ ಕಡಿಮೆ ಮಾಡಬಹುದಲ್ಲವೇ? ಈಗಾಗಲೇ ಕೆಲವು ರಾಜ್ಯಗಳು ಇಂಥ ಕ್ರಮ ಕೈಗೊಂಡಿವೆ. ಎಲ್ಲದಕ್ಕೂ ಕೇಂದ್ರದತ್ತ ಬೊಟ್ಟು ಮಾಡುವ ಬದಲು, ನಮ್ಮ ರಾಜ್ಯ ಸರ್ಕಾರವೂ ತೆರಿಗೆ ಇಳಿಸುವ ತೀರ್ಮಾನ ಕೈಗೊಳ್ಳಲಿ.

ಮಲ್ಲನಗೌಡ, ರಾಯಚೂರು
 

ಪ್ರಮುಖ ಸುದ್ದಿಗಳು