ವದಂತಿಯ ಅವಮಾನ: ಯುವಕ ಆತ್ಮಹತ್ಯೆಗೆ ಯತ್ನ

ದಾವಣಗೆರೆ: ಅನುಮಾನಾಸ್ಪದ ತಿರುಗಾಟದ ಆರೋಪದಲ್ಲಿ ಪೊಲೀಸರು ವಿಚಾರಣೆ ಮಾಡಿದ ವಿಚಾರದಲ್ಲಿ ಹಬ್ಬಿದ ವದಂತಿಯಿಂದ ಅಪಮಾನಿತನಾದ ಹೆಬ್ಬಾಳು ಗ್ರಾಮದ ಯುವಕ ಮಂಗಳವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಹೆಬ್ಬಾಳು ಗ್ರಾಮದ ಚಂದ್ರಪ್ಪ ಅವರ ಮಗ ಮಂಜುನಾಥ (23) ವಿಷ ಸೇವಿಸಿದವರು. ಮಂಜುನಾಥನನ್ನು ವಿಚಾರಣೆಗಾಗಿ ಕರೆದುಕೊಂಡು ಹೋಗಿದ್ದರು. ಬಳಿಕ ಬಿಟ್ಟಿದ್ದರು.

ಪ್ರಮುಖ ಸುದ್ದಿಗಳು