ಎಚ್‌.ಡಿ.ದೇವೇಗೌಡರ ‘ನಮ್ಮೂರ ದ್ಯಾವಪ್ಪ’ ಕೃತಿ ಬಿಡುಗಡೆ

ಹೊಳೆನರಸೀಪುರ: ಸಂಸದ ಎಚ್.ಡಿ.ದೇವೇಗೌಡ ಅವರ ಜೀವನ ಆಧಾರಿತ, 348 ಪುಟಗಳ ಕೃತಿ ‘ನಮ್ಮೂರ ದ್ಯಾವಪ್ಪ’ ಮಂಗಳವಾರ ಇಲ್ಲಿ ಬಿಡುಗಡೆಗೊಂಡಿತು.

ಕೆ.ಆರ್‌.ನಗರ ತಾಲ್ಲೂಕು ಮಿರ್ಲೆ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಫಯಾಜ್‌ ಪಾಶ ಅವರು ‘ನಮ್ಮೂರ ದ್ಯಾವಪ್ಪ’ ಕೃತಿ ರಚಿಸಿದ್ದಾರೆ.

ಈ ಕೃತಿಯು ದೇವೇಗೌಡರ ರಾಜಕೀಯ ಪ್ರವೇಶದ ದಿನದಿಂದ ಪ್ರಧಾನಿ ಆಗುವವರೆಗಿನ ಮುಖ್ಯ ಬೆಳವಣಿಗೆಗಳ ವಿವರ ಹಾಗೂ ಭಾವಚಿತ್ರಗಳನ್ನು ಒಳಗೊಂಡಿದೆ. ಕೃತಿ ಬೆಲೆ ₹ 280.

***

ಗೌಡರ ಜೀವನಚಿರಿತ್ರೆ ವಿವರಿಸುವ ಪುಸ್ತಕವನ್ನು ಕನ್ನಡ, ಇಂಗ್ಲಿಷ್‌, ಹಿಂದಿ ಭಾಷೆಯಲ್ಲಿ ಬಿಡುಗಡೆ ಹಂತದಲ್ಲಿವೆ. ಗೌಡರ ಜೀವನಚರಿತ್ರೆಯನ್ನು ಪಠ್ಯ ಪುಸ್ತಕಕ್ಕೆ ಸೇರಿಸುವ ಸಿದ್ಧತೆ ನಡೆದಿದೆ.
ಡಾ.ರಂಗಪ್ಪ, ವಿಶ್ರಾಂತ ಕುಲಪತಿ, ಜೆಡಿಎಸ್ ಮುಖಂಡ

ಪ್ರಮುಖ ಸುದ್ದಿಗಳು