ಸೌರಾಷ್ಟ್ರ ತಂಡದಲ್ಲಿ ಉತ್ತಪ್ಪ ಮುಂದುವರಿಕೆ

ಬೆಂಗಳೂರು: ಇಲ್ಲಿಯ ರಾಬಿನ್ ಉತ್ತಪ್ಪ ಅವರು ಈ ವರ್ಷದ ದೇಶಿ ಋತುವಿನಲ್ಲಿಯೂ ಸೌರಾಷ್ಟ್ರ ತಂಡವನ್ನು ಪ್ರತಿನಿಧಿಸಲಿದ್ದಾರೆ. 

ಹೋದ ವರ್ಷ ಅವರು ಸೌರಾಷ್ಟ್ರ ತಂಡಕ್ಕೆ ಸೇರ್ಪಡೆಯಾಗಿದ್ದರು. ಈ ಬಾರಿ ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್‌) ಟೂರ್ನಿಯಲ್ಲಿ ಬೆಂಗಳೂರು ತಂಡದಲ್ಲಿ ಆಡಿದ್ದರು. ಅವರು ಕರ್ನಾಟಕ ತಂಡಕ್ಕೆ ಮರಳುತ್ತಾರೆಂಬ ಮಾತುಗಳೂ ಕೇಳಿಬಂದಿದ್ದವು. ಆದರೆ ಅವರು ಈ ಬಾರಿ ಸೌರಾಷ್ಟ್ರ ತಂಡದಲ್ಲಿಯೇ ಮುಂದುವರಿಯುವುದು ಖಚಿತವಾಗಿದೆ.

ಪ್ರಮುಖ ಸುದ್ದಿಗಳು