ಪ್ರತ್ಯೇಕ ಪ್ರಕರಣ; ಇಬ್ಬರು ಗೃಹಿಣಿಯರ ಆತ್ಮಹತ್ಯೆ

ಮೈಸೂರು: ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಗೃಹಿಣಿಯರು ಪತಿಯ ಕಿರುಕುಳದಿಂದ ಬೇಸತ್ತು ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಇಲ್ಲಿನ ಶ್ರೀರಾಂಪುರದ ನಿವಾಸಿ ಪ್ರಮೋದ್ ಅವರ ಪತ್ನಿ ಅಶ್ವಿನಿ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಇವರು ಪ್ರಮೋದ್ ಅವರೊಂದಿಗೆ ಪ್ರೇಮವಿವಾಹವಾಗಿದ್ದರು. ಎರಡೂವರೆ ವರ್ಷ ಹೆಣ್ಣು ಮಗು ಇದೆ. ಆತ್ಮಹತ್ಯೆಗೆ ಪತಿಯ ಕಿರುಕುಳ ಕಾರಣ ಎಂದು ಪತ್ರ ಬರೆದಿಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ವಿದ್ಯಾರಣ್ಯಪುರಂ ಠಾಣೆಯಲ್ಲಿ ದಾಖಲಾಗಿದೆ.

ಜಯನಗರದ ನಿವಾಸಿ ಸಿದ್ದರಾಜು ಪತ್ನಿ ಗೀತಾ (21) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಆರು ವರ್ಷಗಳ ಹಿಂದೆ ಇವರು ಸಿದ್ದರಾಜು ಅವರನ್ನು ವಿವಾಹವಾಗಿದ್ದರು. ಮದುವೆ ಬಳಿಕ ಪತಿಯು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಅಶೋಕಪುರಂ ಠಾಣೆಯಲ್ಲಿ ದಾಖಲಾಗಿದೆ.

ಪ್ರಮುಖ ಸುದ್ದಿಗಳು