‘ನಿಧಾನಗತಿ ಕಾಮಗಾರಿಯಿಂದ ವ್ಯಾಪಾರಕ್ಕೆ ಹಿನ್ನಡೆ’

ಹೊಸಪೇಟೆ: ಇಲ್ಲಿನ ಹಂಪಿ ರಸ್ತೆ ವಿಸ್ತರಣೆ ನಿಧಾನ ಗತಿಯಲ್ಲಿ ನಡೆಯುತ್ತಿರುವುದರಿಂದ ವ್ಯಾಪಾರ, ವಹಿವಾಟಿಗೆ ಹಿನ್ನಡೆಯಾಗಿದೆ.

ಆರು ತಿಂಗಳಿಂದ ರಸ್ತೆ ವಿಸ್ತರಣೆ ನಡೆಯುತ್ತಿದೆ. ಬಾಲ ಚಿತ್ರಮಂದಿರದ ಎದುರು ಸ್ವಲ್ಪ ಕೆಲಸ ಆಗಿರುವುದು ಬಿಟ್ಟರೆ ಉಳಿದ ಕಡೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣಕ್ಕೆ ಮೂರು ಅಡಿ ನೆಲ ಅಗೆಯಲಾಗಿದೆ.

ಕಾಮಗಾರಿ ಆರಂಭಿಸದೇ ಅದನ್ನು ಹಾಗೆಯೇ ಬಿಡಲಾಗಿದೆ. ಜನರಿಗೆ ಓಡಾಡಲು ತೊಂದರೆಯಾಗುತ್ತಿದೆ. ಎಲ್ಲೆಡೆ ದೂಳು ಆವರಿಸಿಕೊಳ್ಳುತ್ತಿದೆ. ಸ್ವಲ್ಪ ಮಳೆ ಬಂದರೂ ಅಗೆದ ಜಾಗದಲ್ಲಿ ನೀರು ನಿಂತು ದುರ್ಗಂಧ ಬೀರುತ್ತದೆ. ಸೊಳ್ಳೆಗಳು ಹುಟ್ಟಿಕೊಳ್ಳುತ್ತವೆ. ಮಳಿಗೆಗಳಿಗೆ ಗ್ರಾಹಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ವ್ಯಾಪಾರ ಆಗುತ್ತಿಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ.

**

ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದಾಗಿದೆ. ಕೂಡಲೇ ಅದರ ವಿಸ್ತರಣೆ ಕೆಲಸ ಮುಗಿಸಬೇಕು. ಇಲ್ಲವಾದಲ್ಲಿ ಮಳಿಗೆಗಳನ್ನು ಮುಚ್ಚಿ, ಮನೆಯಲ್ಲಿ ಕೂರಬೇಕಾಗುತ್ತದೆ.

–ಅಜಯ, ರಫೀಕ್‌, ವಿಜಯಕುಮಾರ, ಸ್ಥಳೀಯ ವ್ಯಾಪಾರಿಗಳು

ಪ್ರಮುಖ ಸುದ್ದಿಗಳು