ಮೈಸೂರಿನ ರಸ್ತೆಯಲ್ಲಿ ಮುಳ್ಳುಹಂದಿ, ಚಿರತೆ

ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಗೌರಿಶಂಕರನಗರದಲ್ಲಿ ಮುಳ್ಳುಹಂದಿಯೊಂದು ರಸ್ತೆಯಲ್ಲಿ ಕಾಣಿಸಿಕೊಂಡಿದ್ದರೆ, ಚಿರತೆಯೊಂದು ಕರುವೊಂದರ ಮೇಲೆ ದಾಳಿ ನಡೆಸಿದೆ.

ಒಂದು ತಿಂಗಳಲ್ಲಿ ಚಿರತೆ ಇಲ್ಲಿ ಎರಡನೆ ಬಾರಿ ಕಾಣಿಸಿಕೊಂಡಿದೆ. ಮುಳ್ಳುಹಂದಿಯು ರಾಜಾರೋಷವಾಗಿ ಬೀದಿಯಲ್ಲಿ ಸಾಮಾನ್ಯ ಹಂದಿಯಂತೆ ತಿರುಗಾಡುತ್ತಿದೆ. ಸಾರ್ವಜನಿಕರು ಇದರಿಂದ ಆತಂಕಗೊಂಡಿದ್ದು, ಚಿರತೆ ಸೆರೆಗೆ ಬೋನು ಇಡಬೇಕು. ಮುಳ್ಳುಹಂದಿಯನ್ನು ಹಿಡಿದು ಕಾಡಿಗೆ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿಗಳು