ಜಮ್ಮು–ಕಾಶ್ಮೀರ, ಹರಿಯಾಣದಲ್ಲಿ ಕಂಪಿಸಿದ ಭೂಮಿ

ಶ್ರೀನಗರ/ಝಜ್ಜಾರ್‌: ಜಮ್ಮು–ಕಾಶ್ಮೀರ ಹಾಗೂ ಹರಿಯಾಣದಲ್ಲಿ ಬುಧವಾರ ಮಂಜಾನೆ ಭೂಕಂಪನವಾಗಿದೆ.

ಜಮ್ಮು–ಕಾಶ್ಮೀರದದಲ್ಲಿ ಬೆಳಿಗ್ಗೆ 5.15ರ ಹೊತ್ತಿಗೆ ಭೂಮಿ ಕಂಪಿಸಿದ್ದು, ಇದರ ತೀವ್ರತೆ ರಿಕ್ಟರ್‌ ಮಾಪನದಲ್ಲಿ 4.6 ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೆಲ ನಿಮಿಷಗಳ ಅಂತರದಲ್ಲಿ 5.43ರ ವೇಳೆಗೆ ಹರಿಯಾಣದಲ್ಲಿ ಎರಡನೇ ಪ್ರಕರಣ ವರದಿಯಾಗಿದೆ. 3.1 ತೀವ್ರತೆಯಲ್ಲಿ ಇಲ್ಲಿನ ಝಜ್ಜಾರ್‌ ಜಿಲ್ಲೆಯಲ್ಲಿ ಭೂಕಂಪನವಾಗಿದೆ.

ಎರಡು ಭೂಕಂಪನಗಳಿಂದ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಮೂರು ದಿನಗಳ ಹಿಂದೆಯೂ ಕಂಪಿಸಿತ್ತು ಭೂಮಿ

ಹರಿಯಾಣದ ಇದೇ ಜಿಲ್ಲೆಯಲ್ಲಿ ಭಾನುವಾರ ಭೂಮಿ ಕಂಪಿಸಿತ್ತು. 10 ಕಿಲೋ ಮೀಟರ್‌ ಆಳದಲ್ಲಿ 3.8ರಷ್ಟು ತೀವ್ರತೆ ದಾಖಲಾಗಿದ್ದ ಇದರ ಕಂಪನ ದೆಹಲಿಗೂ ತಟ್ಟಿತ್ತು.

ಪ್ರಮುಖ ಸುದ್ದಿಗಳು