ಸಾಮಾಜಿಕ ಕಾರ್ಯಕರ್ತರ ಮೇಲೆ ಪ್ರತೀಕಾರ: ಪಟ್ಟಿಯಲ್ಲಿ ಭಾರತ

ಜಿನೀವಾ (ರಾಯಿಟರ್ಸ್): ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವ ಕಾರ್ಯಕರ್ತರ ಮೇಲೆ ಪ್ರತೀಕಾರ ನಡೆಸುತ್ತಿರುವ 38 ದೇಶಗಳ ಪಟ್ಟಿಯಲ್ಲಿ ಭಾರತವನ್ನು ವಿಶ್ವಸಂಸ್ಥೆ ಸೇರಿಸಿದೆ.

ಹಿಂಸೆ, ಕೊಲೆ, ದೌರ್ಜನ್ಯ ಪ್ರಕರಣ ದಾಖಲಿಸುವಿಕೆ, ಅಪರಾಧೀಕರಣ, ಸಾರ್ವಜನಿಕ ಕಳಂಕ ಹೊರಿಸುವುದು, ಕಣ್ಗಾವಲು ನಡೆಸುವ ಮೂಲಕ ಮಾನವ ಹಕ್ಕು ಕಾರ್ಯಕರ್ತರನ್ನು ಬೆದರಿಸಲಾಗುತ್ತಿದೆ ಎಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರು ಆರೋಪಿಸಿದ್ದಾರೆ.

ಮಾನವಹಕ್ಕುಗಳ ರಕ್ಷಣೆಯಲ್ಲಿ ವಿಶ್ವಸಂಸ್ಥೆಗೆ ನೆರವು ನೀಡುತ್ತಿರುವ ಜಗತ್ತಿನ ಎಲ್ಲ ದೇಶಗಳ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ಅಗತ್ಯ ಎಂದು ಅವರು ಹೇಳಿದ್ದಾರೆ. ಇಂತಹ ಪ್ರಕರಣಗಳು 38 ದೇಶಗಳಲ್ಲಿ ವರದಿಯಾಗಿವೆ. 

ಪ್ರಮುಖ ಸುದ್ದಿಗಳು