10 ತಿಂಗಳ ಹಿಂದಿನ ಮಟ್ಟಕ್ಕೆ ಇಳಿದ ಚಿಲ್ಲರೆ ಹಣದುಬ್ಬರ 

ನವದೆಹಲಿ: ಆಗಸ್ಟ್‌ ತಿಂಗಳ ರಿಟೇಲ್‌ ಹಣದುಬ್ಬರವು ಶೇ 3.69ಕ್ಕೆ ಇಳಿದಿದ್ದು, 10 ತಿಂಗಳ ಹಿಂದಿನ ಮಟ್ಟಕ್ಕೆ ಕುಸಿದಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 3.28 ಮತ್ತು ಜುಲೈ ತಿಂಗಳಲ್ಲಿ ಶೇ 4.17ರಷ್ಟಿತ್ತು.

ಅಲ್ಪಾವಧಿಯಲ್ಲಿ ಹಣದುಬ್ಬರವು, ಭಾರತೀಯ ರಿಸರ್ವ್‌ ಬ್ಯಾಂಕ್‌ ಅಂದಾಜು ಮಾಡಿದ ಶೇ 4ರ ಮಟ್ಟಕ್ಕಿಂತ ಕಡಿಮೆ ಇರಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಣದುಬ್ಬರವು ಆರ್‌ಬಿಐನ ಹಿತಕರ ಮಟ್ಟಕ್ಕಿಂತ ಕಡಿಮೆ ಇರುವುದರಿಂದ, ಅಲ್ಪಾವಧಿ ಬಡ್ಡಿ ದರಗಳು ಏರಿಕೆಯಾಗುವ ಸಾಧ್ಯತೆ ಕ್ಷೀಣಗೊಂಡಿದೆ.

ತರಕಾರಿ ಮತ್ತು ಹಣ್ಣಗಳು ಸೇರಿದಂತೆ ಅಡುಗೆ ಬಳಕೆ ವಸ್ತುಗಳ ಬೆಲೆ ಇಳಿಕೆಯಾಗಿರುವ ಕಾರಣದಿಂದ ಚಿಲ್ಲರೆ ಹಣದುಬ್ಬರದ ತಗ್ಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಿಂದ ತೈಲ ದರ ಆಗಸ್ಟ್‌ನಲ್ಲಿ ಶೇ 7.96ರಿಂದ ಶೇ 8.47ರಷ್ಟು ಏರಿಕೆ ಕಂಡಿದೆ. 

ಪ್ರಮುಖ ಸುದ್ದಿಗಳು