ಕಲಬುರ್ಗಿ: ಸೆ.22 ರಂದು ಮೇಯರ್, ಉಪ ಮೇಯರ್ ಚುನಾವಣೆ

ಕಲಬುರ್ಗಿ: ಕಲಬುರ್ಗಿ ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಮತ್ತು ನಾಲ್ಕು ಸ್ಥಾಯಿ ಸಮಿತಿಗಳಿಗೆ ಸೆ.22 ರಂದು ಮಧ್ಯಾಹ್ನ 3 ಗಂಟೆಗೆ ಚುನಾವಣೆ ನಡೆಯಲಿದೆ.

ಪ್ರಾದೇಶಿಕ ಆಯುಕ್ತರನ್ನು ಚುನಾವಣಾ ಅಧಿಕಾರಿಯನ್ನಾಗಿ ಸರ್ಕಾರ ನೇಮಕ ಮಾಡಿದೆ.

ಮೇಯರ್ ಸ್ಥಾನವು ‘ಸಾಮಾನ್ಯ(ಮಹಿಳೆ)’ ಹಾಗೂ ಉಪ ಮೇಯರ್ ಸ್ಥಾನವು ‘ಸಾಮಾನ್ಯ(ಮಹಿಳೆ)’ಗೆ ಮೀಸಲಾಗಿದೆ. ತೆರಿಗೆ, ಹಣಕಾಸು ಮತ್ತು ಮೇಲ್ಮನವಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಹಾಗೂ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗಳಿಗೂ ಅದೇ ದಿನ ಚುನಾವಣೆ ನಡೆಯಲಿದೆ.

ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸುವ ಪಾಲಿಕೆ ಸದಸ್ಯರು ಸೆ. 22ರಂದು ಮಧ್ಯಾಹ್ನ 1ಗಂಟೆಯೊಳಗೆ ಇಂದಿರಾ ಸ್ಮಾರಕ ಭವನ(ಟೌನ್ ಹಾಲ್‌) ಪಾಲಿಕೆಯ ಆಯುಕ್ತರಿಗೆ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ.

ಪ್ರಮುಖ ಸುದ್ದಿಗಳು