ಬೆಂಬಲ ಬೆಲೆಗೆ ಪ್ರಧಾನ ಮಂತ್ರಿ ಅನ್ನದಾತ ಆಯ್‌ ಸಂರಕ್ಷಣಾ ಯೋಜನೆಗೆ ಸಂಪುಟ ಒಪ್ಪಿಗೆ

ನವದೆಹಲಿ: ಲೋಕಸಭೆ ಚುನಾವಣೆ ಹತ್ತಿರುವಾಗುತ್ತಿರುವಂತೆಯೇ ಕೇಂದ್ರ ಸರ್ಕಾರ ರೈತರತ್ತ ಗಮನ ಹರಿಸಿದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ₹15,053 ಕೋಟಿಯ ಹೊಸ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. 

ಕನಿಷ್ಠ ಬೆಂಬಲ ಬೆಲೆ ನೀಡುವುದಕ್ಕಾಗಿ ಪ್ರಧಾನ ಮಂತ್ರಿ ಅನ್ನದಾತ ಆಯ್‌ ಸಂರಕ್ಷಣಾ ಯೋಜನೆ (ಪಿಎಂ–ಆಶಾ) ಎಂಬ ಹೊಸ ನೀತಿಗೆ ಸಂಪುಟ ಅನುಮೋದನೆ ಕೊಟ್ಟಿದೆ. ಪರಿಹಾರ ನೀಡಿಕೆಗಾಗಿ ರಾಜ್ಯಗಳು ವಿವಿಧ ಯೋಜನೆಗಳಿಂದ ತಮಗೆ ಬೇಕಾದ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಕೃಷಿ ಉತ್ಪನ್ನ ಖರೀದಿಗೆ ಖಾಸಗಿ ಕ್ಷೇತ್ರವನ್ನು ಭಾಗಿಯಾಗಿಸುವುದಕ್ಕೆ ಹೊಸ ನೀತಿಯಲ್ಲಿ ಅವಕಾಶ ಇದೆ.

ಪ್ರಮುಖ ಸುದ್ದಿಗಳು