ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌: ಅರ್ಚನಾ ಕಾಮತ್‌ಗೆ ಕಂಚು

ಬೆಂಗಳೂರು: ಕರ್ನಾಟಕದ ಅರ್ಚನಾ ಕಾಮತ್‌ ಅವರು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ (ದಕ್ಷಿಣ ವಲಯ) ಕಂಚಿನ ಪದಕ ಗೆದ್ದಿದ್ದಾರೆ. 

ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಅರ್ಚನಾ, 7–11, 13–11, 13–11, 9–11, 5–11, 11–6, 2–11ರಿಂದ ಹರಿಯಾಣದ ಸುತೀರ್ಥ ಮುಖರ್ಜಿ ಅವರ ವಿರುದ್ಧ ಮಣಿದರು. ಇದರೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. 

ಮೊದಲ ಸುತ್ತಿನ ಪಂದ್ಯದಲ್ಲಿ ಅರ್ಚನಾ, 4–3ರಿಂದ ತೆಲಂಗಾಣದ ಮೋನಿಕಾ ಮನೋಹರ್‌ ವಿರುದ್ಧ, ಎರಡನೇ ಸುತ್ತಿನ ಪಂದ್ಯದಲ್ಲಿ 4–1ರಿಂದ ನಿಖತ್‌ ಬಾನು ಎದುರು ಗೆದ್ದಿದ್ದರು. ಪ್ರೀ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 4–0ಯಿಂದ ಫ್ರೆನಾಜ್‌ ಚಿಪಿಯಾ ವಿರುದ್ಧ ಜಯಿಸಿದ್ದರು. ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ 4–1ರಿಂದ ರೀತ್‌ ರಿಷ್ಯಾ ಟೆನಿಸನ್‌ ಎದುರು ಜಯ ಸಾಧಿಸಿದ್ದರು. 

 

 

ಪ್ರಮುಖ ಸುದ್ದಿಗಳು