ಪೌರಾಡಳಿತ: 53 ಅಧಿಕಾರಿಗಳ ವರ್ಗ

ಬೆಂಗಳೂರು: ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಬಂಡಾಯದ ಬೆನ್ನಲ್ಲೇ, ಇಲಾಖೆಯ 53 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ನಗರಾಭಿವೃದ್ಧಿ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.

ಜಿಲ್ಲೆಯಲ್ಲಿ ವರ್ಗಾವಣೆ ವಿಷಯದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮೂಗು ತೂರಿಸುತ್ತಿದ್ದಾರೆ ಎಂಬುದು ಜಾರಕಿಹೊಳಿ ಸಹೋದರರ ಆಕ್ಷೇಪಗಳಲ್ಲಿ ಒಂದು. ಜಾರಕಿಹೊಳಿ ಅವರ ಅಪೇಕ್ಷೆಯಂತೆ ಅಧಿಕಾರಿಗಳನ್ನು ವರ್ಗಾಯಿಸಿ ಮೈತ್ರಿ ಸರ್ಕಾರ ಸಮಾಧಾನಗೊಳಿಸಲು ಮುಂದಾಗಿದೆ. ಮೈತ್ರಿ ಸರ್ಕಾರ ಅನೇಕ ಶಾಸಕರು ವರ್ಗಾವಣೆ ಪ್ರಕ್ರಿಯೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಅವರನ್ನೂ ಸಮಾಧಾನಪಡಿಸಲು ಸರ್ಕಾರ ಪ್ರಯತ್ನಿಸಿದೆ ಎಂದು ಹೇಳಲಾಗುತ್ತಿದೆ.

ಪ್ರಮುಖ ಸುದ್ದಿಗಳು