ಹೆಲಿಕಾಪ್ಟರ್‌ ಖರೀದಿ ಹಗರಣ: ತ್ಯಾಗಿಗೆ ಜಾಮೀನು

ನವದೆಹಲಿ: ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಯುಪಡೆ ಮಾಜಿ ಮುಖ್ಯಸ್ಥ ಎಸ್‌.ಪಿ. ತ್ಯಾಗಿ ಮತ್ತು ಇತರರಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ.

ನ್ಯಾಯಾಲಯದ ಮುಂದೆ ಬುಧವಾರ ಹಾಜರಾದ ತ್ಯಾಗಿ ಮತ್ತು ಅವರ ಸೋದರ ಸಂಬಂಧಿಗಳಿಗೆ ವಿಶೇಷ ನ್ಯಾಯಾಧೀಶ ಅರವಿಂದ್‌ ಕುಮಾರ್‌ ಜಾಮೀನು ನೀಡಿದರು.

ಈ ಪ್ರಕರಣಕ್ಕೆ ಸಂಬಂಧಿಸಿ ಖುದ್ದಾಗಿ ಹಾಜರಾಗುವಂತೆ ನ್ಯಾಯಾಲಯ ಜುಲೈ 24ರಂದು ತ್ಯಾಗಿ, ಆಗಸ್ಟಾ ವೆಸ್ಟ್‌ಲ್ಯಾಂಡ್‌ ಮತ್ತು ಫಿನ್ಮೆಕ್ಕಾನಿಕಾ ನಿರ್ದೇಶಕರು ಹಾಗೂ ಇತರರಿಗೆ ಸಮನ್ಸ್‌ ನೀಡಿತ್ತು. ಆದರೆ, ವಿದೇಶದಲ್ಲಿನ ಕಂಪನಿಗಳ ನಿರ್ದೇಶಕರು ಬುಧವಾರ ಹಾಜರಾಗಲಿಲ್ಲ.

ಪ್ರಮುಖ ಸುದ್ದಿಗಳು