ಹಾರ್ದಿಕ್‌ ಉಪವಾಸ ಸತ್ಯಾಗ್ರಹ ಅಂತ್ಯ

ಅಹಮದಾಬಾದ್‌: ಕಳೆದ 19 ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಪಟೇಲ್‌ ಸಮುದಾಯದ ಮುಖಂಡ ಹಾರ್ದಿಕ್‌ ಪಟೇಲ್‌ ಬುಧವಾರ ಅಂತ್ಯಗೊಳಿಸಿದ್ದಾರೆ.

ರೈತರ ಸಾಲ ಮನ್ನಾ ಮಾಡಬೇಕು ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗಗಳಲ್ಲಿ ಪಟೇಲ್‌ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕು ಹಾಗೂ ದೇಶದ್ರೋಹ ಆರೋಪದ ಮೇಲೆ ಬಂಧಿಸಿರುವ ತಮ್ಮ ಆಪ್ತ ಅಲ್ಪೇಶ್‌ ಕಥಿರಿಯಾ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಹಾರ್ದಿಕ್‌ ಪಟೇಲ್‌ ಆಗಸ್ಟ್‌ 25ರಿಂದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.

‘ಹಿರಿಯ ಮುಖಂಡರು ನೀಡಿರುವ ಸಲಹೆಯನ್ನು ಗೌರವಿಸುವ ಉದ್ದೇಶದಿಂದ ಸತ್ಯಾಗ್ರಹ ಅಂತ್ಯಗೊಳಿಸಿದ್ದೇನೆ. ನಾವೆಲ್ಲವೂ ಒಗ್ಗಟ್ಟಾಗಿದ್ದೇವೆ ಎನ್ನುವುದನ್ನು ತೋರಿಸಬೇಕಾಗಿದೆ. ನಾವು  ಹೋರಾಟ ನಡೆಸಲು ಬದುಕಬೇಕಾಗಿದೆ. ಬದುಕಲು ಹೋರಾಟ ನಡೆಸಬೇಕಾಗಿದೆ’ ಎಂದು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಬಳಿಕ ಹಾರ್ದಿಕ್‌ ಹೇಳಿದರು.

‘ಸರ್ಕಾರದ ವಿರುದ್ಧ ಮಾತನಾಡುವವರನ್ನು ದೇಶದ್ರೋಹಿ ಎಂದು ಬಿಂಬಿಸಲಾಗುತ್ತಿದೆ. ಮಾತನಾಡದಿದ್ದರೆ ಮೌನಿ ಎಂದು ಟೀಕಿಸುತ್ತಾರೆ. ಹೀಗಾಗಿ, ದೇಶದ್ರೋಹಿ ಎಂದೇ ಕರೆಯಿಸಿಕೊಳ್ಳಲು ನಾನು ಇಚ್ಛಿಸುತ್ತೇನೆ' ಎಂದು ಹಾರ್ದಿಕ್‌ ಹೇಳಿದ್ದಾರೆ.

‘19 ದಿನಗಳ ಉಪವಾಸದಿಂದ ಹೊಸ ಚೈತನ್ಯ ಮೂಡಿದೆ. ಮುಂದಿನ ದಿನಗಳಲ್ಲಿ ರೈತರ ವಿಷಯಗಳಿಗಾಗಿ ಗುಜರಾತ್‌ನ 12 ಸಾವಿರ ಗ್ರಾಮಗಳಿಗೆ ತೆರಳಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತೇನೆ. ಗಾಂಧಿನಗರಕ್ಕೆ ಬರುವ ವೇಳೆಗೆ ಬಿಜೆಪಿ ಸರ್ಕಾರ ಪತನಗೊಂಡಿರುತ್ತದೆ’ ಎಂದು ತಿಳಿಸಿದರು.

ಪ್ರಮುಖ ಸುದ್ದಿಗಳು