ಚೇತರಿಕೆ ಹಾದಿಗೆ ಮರಳಿದ ಸೂಚ್ಯಂಕ

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಬುಧವಾರದ ವಹಿವಾಟಿನಲ್ಲಿ 305 ಅಂಶಗಳ ಏರಿಕೆ ಕಂಡು ಚೇತರಿಕೆಯ ಹಾದಿಗೆ ಮರಳಿದೆ.

ಭಾರಿ ಯಂತ್ರೋಪಕರಣ, ಲೋಹ ಮತ್ತು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ ಷೇರುಗಳಲ್ಲಿ (ಎಫ್‌ಎಂಸಿಜಿ) ಕಂಡು ಬಂದ ಖರೀದಿ ಆಸಕ್ತಿಯಿಂದಾಗಿ  ಸೂಚ್ಯಂಕವು ಏರಿಕೆ ದಾಖಲಿಸಿ 37,718 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ಪೇಟೆಯಲ್ಲಿ, ದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತು ಸಾಮಾನ್ಯ ಹೂಡಿಕೆದಾರಿಂದ ಖರೀದಿ ಉತ್ಸಾಹ ಕಂಡು ಬಂದಿತು.

ತೀವ್ರ ಏರಿಳಿತ ಕಂಡ ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ದಿನದಂತ್ಯದಲ್ಲಿ 82 ಅಂಶ ಏರಿಕೆ ದಾಖಲಿಸಿ 11,300 ಅಂಶಗಳ ಗಡಿ ದಾಟಿತು.

ಪ್ರತಿ ಬ್ಯಾರೆಲ್‌ಗೆ 79 ಡಾಲರ್‌ಗೆ ತಲುಪಿದ್ದ ಬ್ರೆಂಟ್‌ ಕಚ್ಚಾ ತೈಲದ ಬೆಲೆ ಕೆಲಮಟ್ಟಿಗೆ ಇಳಿಕೆ ಕಂಡಿದೆ.

ಕೈಗಾರಿಕಾ  ಉತ್ಪಾದನಾ ಸೂಚ್ಯಂಕ (ಐಐಪಿ) ಮತ್ತು  ಹಣದುಬ್ಬರದ ಅಂಕಿ ಅಂಶಗಳು ಪ್ರಕಟಗೊಳ್ಳುವ ಮೊದಲೇ ಪೇಟೆಯಲ್ಲಿ ಖರೀದಿ ಚಟುವಟಿಕೆಗಳು ಗರಿಗೆದರಿದ್ದವು.

 

 

ಪ್ರಮುಖ ಸುದ್ದಿಗಳು