ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಶಮಂತ್‌, ಅನನ್ಯಾ

ಬೆಂಗಳೂರು: ಶಮಂತ್‌ ರಾವ್‌ ಹಾಗೂ ಅನನ್ಯಾ ಪ್ರವೀಣ್‌ ಅವರು ಯೊನೆಕ್ಸ್‌ ಸನ್‌ರೈಸ್‌ ಆಶ್ರಯದ ಕರ್ನಾಟಕ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ. 

ಬುಧವಾರ ನಡೆದ 19 ವರ್ಷದೊಳಗಿನವರ ಬಾಲಕರ ಪ್ರೀ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ ಶಮಂತ್‌, 21–13, 21–18ರಿಂದ ಚಿರಾಗ್‌ ಅವರನ್ನು ಮಣಿಸಿದರು. 

ಇನ್ನೊಂದು ಪಂದ್ಯದಲ್ಲಿ ಕೆ. ಪೃಥ್ವಿ ರಾಯ್‌, 21–9, 17–21, 21–8ರಿಂದ ರೋಹಿತ್‌ ನಾರಂಗ್‌ ಅವರನ್ನು ಪರಾಭವಗೊಳಿಸಿದರು. 

ಎಸ್‌. ಭಾರ್ಗವ್‌, 21–11, 21–14ರಿಂದ ಅಭಯ್ ಪೈ ಅವರ ಎದುರು ಗೆದ್ದರು. ಎಂ. ರೋಹಿತ್‌, 19–21, 21–16, 21–19ರಿಂದ ಎಸ್‌. ನರೇನ್‌ ಅಯ್ಯರ್‌ ವಿರುದ್ಧ ಜಯಿಸಿದರು. 

19 ವರ್ಷದೊಳಗಿನವರ ಬಾಲಕಿಯರ ಪ್ರೀ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿಯ ಆಟಗಾರ್ತಿ ಅನನ್ಯಾ, 24–22, 21–3 ರಿಂದ ಅದ್ವಿಕಾ ಗಣೇಶ್‌ ಅವರನ್ನು ಸೋಲಿಸಿದರು. ಇನ್ನೊಂದು ಪಂದ್ಯದಲ್ಲಿ ಡಿ. ಶೀಥಲ್‌, 21–19, 21–7ರಿಂದ ಸುಪ್ರಜಾ ಪ್ರಭಾಕರ್‌ ಅವರನ್ನು ಮಣಿಸಿದರು. 

ಮೇಧಾ ಶಶಿಧರನ್‌, 21–16, 21–13ರಿಂದ ಅನುಶಾ ಅಮೋಘ್‌ ಅವರ ವಿರುದ್ಧ ಜಯಿಸಿದರು. ರಮ್ಯಾ ವೆಂಕಟೇಶ್‌, 12–21, 21–15, 21–9ರಿಂದ ಪ್ರಚಿತಾ ಪದ್ಮನಾಭ ಅವರ ಎದುರು ಗೆದ್ದರು. 

ಪ್ರಮುಖ ಸುದ್ದಿಗಳು