ಹೊಸ ವಿನ್ಯಾಸದ ಎಸ್‌ಎಂಎಲ್‌ ಇಸುಜು ಟ್ರಕ್‌

ಲಘು ಮತ್ತು ಮಧ್ಯಮ ಗಾತ್ರದ ವಾಣಿಜ್ಯ ವಾಹನ ವಿಭಾಗದಲ್ಲಿ ಜನಪ್ರಿಯವಾಗಿರುವ ಎಸ್‌ಎಂಎಲ್‌ ಇಸುಜು ಕಂಪನಿ ಇದೀಗ ಭಾರತದ ಗ್ರಾಹರಿಗೆ ಜಪಾನ್‌ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೊಸ ಟ್ರಕ್‌ಗಳನ್ನು ಅಭಿವೃದ್ಧಿಪಡಿಸಿದೆ. ಗ್ಲೋಬಲ್‌ ಸಿರೀಸ್‌ (ಜಿಎಸ್‌) ಬ್ರ್ಯಾಂಡ್‌ನಡಿ ನೂತನ ವಿನ್ಯಾಸದ ಸಂಪೂರ್ಣ ಸ್ವದೇಶಿ ಟ್ರಕ್‌ಗಳನ್ನು ದಕ್ಷಿಣ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

‘ಜಿಎಸ್‌‘ ಬ್ರ್ಯಾಂಡ್‌ನಡಿ ಸಾಮ್ರಾಟ್‌ ಎಚ್‌ಡಿ 19, ಸರ್ತಾಜ್‌, ಸೂಪರ್‌, ಟಿಪ್ಪರ್ ಸುಪ್ರೀಂ, ಪ್ರಸ್ಟೀಜ್‌, ಸರ್ತಾಜ್‌ ಎಚ್‌ಜಿ 72 ಮಾದರಿಯ ವಾಹನಗಳು ಲಭ್ಯವಿವೆ.

‘ಬದಲಾವಣೆಗೆ ಹೊಂದಿಕೊಂಡರೆ ಮಾತ್ರವೇ ಪೈಪೊಟಿ ನೀಡಲು ಸಾಧ್ಯ. ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅಳವಡಿಸಿಕೊಂಡು ಉದ್ಯಮವನ್ನು ಬೆಳವಣಿಗೆಯತ್ತ ಕೊಂಡೊಯ್ಯಬೇಕಿದೆ. ಮಾರುಕಟ್ಟೆ ವಿಶ್ಲೇಷಣೆ ಮತ್ತು ಚಾಲಕರ ಸಲಹೆ, ಸೂಚನೆಗಳನ್ನು ಪಡೆದುಕೊಂಡು ‘ಜಿಎಸ್‌’ ಟ್ರಕ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ’ ಎನ್ನುತ್ತಾರೆ ಎಸ್‌ಎಂಎಲ್‌ ಇಸುಜು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನಾವಲ್‌ ಕುಮಾರ್ ಶರ್ಮಾ.

ಜಿಎಸ್‌ ಟ್ರಕ್‌ನ ಕ್ಯಾಬಿನ್‌ ಅನ್ನು ಕಂಪನಿಯ ತಜ್ಞರು ಜಪಾನ್‌ ತಂತ್ರಜ್ಞಾನವನ್ನು ಬಳಸಿಕೊಂಡು ವಿನ್ಯಾಸಗೊಳಿಸಿದ್ದಾರೆ. ಭಾರತದ ಸರಕು ಸಾಗಣೆಯ ಅಗತ್ಯ ಮತ್ತು ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ಸ್ಥಳಾವಕಾಶವನ್ನೂ ಒಳಗೊಂಡು ಕೆಲವು ಬದಲಾವಣೆಗಳನ್ನೂ ಮಾಡಲಾಗಿದೆ. ಅಮೆರಿಕ ಅಥವಾ ಯುರೋಪ್‌ನಲ್ಲಿ ಇರುವ ಗುಣಮಟ್ಟಕ್ಕೆ ಹೋಲುವಂತೆ ಬಿಎಸ್‌4 ನಿಯಮದಂತೆ ಪ್ಯಾನಲ್‌ ಸಿದ್ಧಪಡಿಸಲಾಗಿದೆ.‌

ಎಂಜಿನ್‌ ಮತ್ತು ಗಿಯರ್‌ ಬಾಕ್ಸ್‌ಗಳಿಗೆ 3 ವರ್ಷ ಅಥವಾ ಅನಿಯಮಿತ ಕಿಲೋಮೀಟರ್‌ ವಾರಂಟಿ. ವಾಹನಕ್ಕೆ 2 ವರ್ಷ ಅಥವಾ ಅನಿಯಮಿತ ಕಿಲೋಮೀಟರ್‌ ವಾರಂಟಿ ಲಭ್ಯವಿದೆ. ಬೆಲೆ ₹ 14 ಲಕ್ಷದಿಂದ 17 ಲಕ್ಷದವರೆಗಿದೆ.

ಎಸ್‌ಎಂಎಲ್‌ ಸಾರಥಿ

ವಾಹನ ಮಾಲೀಕರು ಟ್ರಕ್‌ಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿ ಪಡೆಯಲು ಹಾಗೂ ರಸ್ತೆ ಬದಿ ವಾಹನ ದುರಸ್ತಿ ಸೇವೆ ಒದಗಿಸುವ ಉದ್ದೇಶದಿಂದ ಕಂಪನಿಯು ‘ಎಸ್‌ಎಂಎಲ್‌ ಸಾರಥಿ’ ಎಂಬ ಟೆಲಿಮ್ಯಾಟಿಕ್ಸ್‌ ಸೌಲಭ್ಯಕ್ಕೂ ಚಾಲನೆ ನೀಡಿದೆ. ಇದನ್ನು ವಾಹನಕ್ಕೆ ಅಳವಡಿಸುವುದರಿಂದ ವಾಹನ ಮಾಲೀಕರು, ಸರಕು ಸಾಗಣೆ ನಿರ್ವಾಹಕರಿಗೆ ದಿನದ 24 ಗಂಟೆಯೂ ವಾಹನದ ಮೇಲೆ ನಿಗಾ ಇಡಬಹುದು.

ಈ ಸಂಬಂಧ ಮೊಬೈಲ್‌ ಅಪ್ಲಿಕೇಷನ್‌ ಅನ್ನೂ ಪರಿಚಯಿಸಿದೆ. ಇದರ ನೆರವಿನಿಂದ ಚಾಲಕರು ಹತ್ತಿರದಲ್ಲಿ ಇರುವ ಸರ್ವೀಸ್ ಸೆಂಟರ್‌ಗಳ ಮಾಹಿತಿ ಪಡೆಯಬಹುದು. ವಾಹನ ಕೆಟ್ಟು ನಿಂತಾಗ ಸಮೀಪದ ಸೇವಾ ಕೇಂದ್ರಕ್ಕೆ ಕರೆ ಮಾಡಬಹುದು. ಚಾಲಕನೇ ವಾಹನ ಸರಿ ಪಡಿಸಲು ಸಾಧ್ಯವಿದ್ದರೆ ಸೇವಾ ಕೇಂದ್ರದ ಸಿಬ್ಬಂದಿ ಮಾರ್ಗದರ್ಶನ ನೀಡುತ್ತಾರೆ. ಇಲ್ಲವಾದರೆ ತಕ್ಷಣವೇ ಸ್ಥಳಕ್ಕೆ ಸಾರಥಿ ವಾಹನ ಬಂದು ಸಮಸ್ಯೆ ಬಗೆಹರಿಸಲಿದೆ.

 

ಸಾಮರ್ತ್‌ ಜಿಎಸ್‌

ಎಂಜಿನ್‌;ಬಿಎಸ್‌4 ಎಸ್‌ಎಲ್‌ಟಿ4 4 ಸಿಲಿಂಡರ್‌, ಡೀಸೆಲ್‌ ಟರ್ಬೊ ಚಾರ್ಜರ್‌ ವಿತ್ ಇಂಟರ್ ಕೂಲರ್

ಟ್ರಾನ್ಸ್‌ಮಿಷನ್‌; ಸಿಂಕ್ರೋಮೆಷ್‌ 5 ಪಾರ್ವರ್ಡ್‌ ಮತ್ತು 1 ರಿವರ್ಸ್‌ ಗಿಯರ್

ಕ್ಲಚ್‌; ಸಿಂಗಲ್‌ ಪ್ಲೇಟ್‌ ಡಯಾಗ್ರಾಂ

ಬ್ರೇಕ್‌; ಏರ್‌ ಬ್ರೇಕ್‌

ಸಸ್ಪೆನ್ಶನ್‌;ಸೆಮಿ ಎಲಿಪ್ಟಿಕಲ್‌ ವಿತ್‌ ಮಲ್ಟಿ ಲೀಫ್‌ ಸ್ಪ್ರಿಂಗ್ಸ್‌

ವಾಹನದ ಸರಾಸರಿ ತೂಕ;10250 ಕೆ.ಜಿ

ಕ್ಯಾಬಿನ್‌ ಛಾಸಿ ಇದೆ

ಪ್ರಮುಖ ಸುದ್ದಿಗಳು