ಪ್ರಜಾವಾಣಿ ವೆಬ್ ಡೆಸ್ಕ್
ಜಾಗರಣೆ ಮಹಾಶಿವರಾತ್ರಿಯ ಒಂದು ಭಾಗ. ಅಪರೂಪಕ್ಕೆ ಎಚ್ಚರ ಇರಬೇಕು ಎಂದರೆ ಎಂತಹವರಿಗೂ ಕಷ್ಟವೇ. ಹೀಗಾಗಿ ಶಿವರಾತ್ರಿ ಜಾಗರಣೆಯನ್ನು ಹೇಗೆಲ್ಲ ಮಾಡಬಹುದು ಎನ್ನುವುದಕ್ಕೆ ಸಲಹೆ ಇಲ್ಲಿದೆ.
ಸಿನಿಮಾ ನೋಡಿ
ಶಿವರಾತ್ರಿ ಜಾಗರಣೆ ಮಾಡಬೇಕೆನ್ನುವವರು ಸಮಯ ಕಳೆಯಲು ಭಕ್ತಿ ಪ್ರಧಾನ ಸಿನಿಮಾಗಳನ್ನು ನೋಡಬಹುದು. ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಶಿವನ ಕುರಿತಾದ ಸಿನಿಮಾಗಳಿವೆ.
ಕಾರ್ಯಕ್ರಮ ಆಯೋಜಿಸಿ
ನೀವೇನಾದರೂ ಖಾಸಗಿ ಬಡಾವಣೆಗಳಲ್ಲಿದ್ದರೆ ಸಂಗೀತ, ನಾಟಕದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಅದರಲ್ಲಿ ತೊಡಗಿಕೊಳ್ಳಿ.
ಹತ್ತಿರದ ದೇಗುಲಗಳಿಗೆ ತೆರಳಿ
ಸಾಮಾನ್ಯವಾಗಿ ಶಿವರಾತ್ರಿಯಂದು ಶಿವನ ದೇಗುಲಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ಹೀಗಾಗಿ ನೀವೂ ಅಲ್ಲಿಗೆ ತೆರಳಿ ಶಿವನ ಧ್ಯಾನದಲ್ಲಿ ತೊಡಗಿಸಿಕೊಂಡು ಶ್ಲೋಕಗಳನ್ನು ಪಠಿಸಬಹುದು.
ಪುರಾಣಗಳನ್ನು ತಿಳಿದುಕೊಳ್ಳಿ
ಶಿವನ ಲೀಲೆಯ ಕುರಿತಾದ ಪುರಾಣಗಳ ಬಗ್ಗೆ ತಿಳಿದುಕೊಳ್ಳಿ. ಯುಟ್ಯೂಬ್ ವಿಡಿಯೊ ಅಥವಾ ಪುಸ್ತಕಗಳನ್ನು ಓದುವ ಮೂಲಕ ಜಾಗರಣೆ ಪೂರ್ಣಗೊಳಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.