ಪ್ರಜಾವಾಣಿ ವೆಬ್ ಡೆಸ್ಕ್
ಭಾರತ ಕ್ರಿಕೆಟ್ ತಂಡದ ತಾರಾ ಆಟಗಾರ ಕೆ. ಎಲ್. ರಾಹುಲ್ ಅವರು ಪತ್ನಿ ಅತಿಯಾ ಶೆಟ್ಟಿ ಜೊತೆ ಮಂಗಳೂರಿಗೆ ಬಂದಿದ್ದಾರೆ.
ಚಿತ್ರಕೃಪೆ: ಇನ್ಸ್ಟಾಗ್ರಾಮ್
ಕೆ. ಎಲ್. ರಾಹುಲ್ ದಂಪತಿ ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಚಿತ್ರಕೃಪೆ: ಇನ್ಸ್ಟಾಗ್ರಾಮ್
ಕೆ. ಎಲ್. ರಾಹುಲ್ ದಂಪತಿ ಕುಕ್ಕೆ ಸುಬ್ರಮಣ್ಯ ದೇವರ ಆಶೀರ್ವಾದ ಪಡೆದುಕೊಂಡಿದ್ದು, ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರಕೃಪೆ: ಇನ್ಸ್ಟಾಗ್ರಾಮ್
ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಪ್ರಸಾದ, ಮನೆಯ ಸುತ್ತಲಿನ ಪರಿಸರ, ಸಮುದ್ರ ತೀರದ ಚಿತ್ರಗಳನ್ನು ಅತಿಯಾ ಶೆಟ್ಟಿ ಅವರು ಹಂಚಿಕೊಂಡಿದ್ದಾರೆ.
ಚಿತ್ರಕೃಪೆ: ಇನ್ಸ್ಟಾಗ್ರಾಮ್
ಅತಿಯಾ ಅವರು ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು, ‘ಈ ಮಣ್ಣಿನೊಂದಿದೆ ಯಾವಗಲೂ ಸಂಪರ್ಕವಿರುತ್ತದೆ’ ಎಂದು ಅತಿಯಾ ಬರೆದುಕೊಂಡಿದ್ದಾರೆ.
ಚಿತ್ರಕೃಪೆ: ಇನ್ಸ್ಟಾಗ್ರಾಮ್
ಅತಿಯಾ ಹಂಚಿಕೊಂಡಿರುವ ಚಿತ್ರಗಳಿಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ‘ನಮ್ಮೂರು’ ಎಂದು ಕಮೆಂಟ್ ಮಾಡಿದ್ದರೆ, ರಾಹುಲ್ ಅವರು ಹೃದಯದ ಎಮೋಜಿ ಹಾಕಿದ್ದಾರೆ.
ಚಿತ್ರಕೃಪೆ: ಇನ್ಸ್ಟಾಗ್ರಾಮ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.