ಪ್ರಜಾವಾಣಿ ವೆಬ್ ಡೆಸ್ಕ್
ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋ ಭಾರ್ಗವಿ LLB ಸೀರಿಯಲ್‌ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಗೌತಮಿ ಜಾಧವ್ 'ಮಂಗಳಾಪುರಂ' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ರಿಷಿಗೆ ಜೋಡಿಯಾಗಿ ನಟಿ ಗೌತಮಿ ಜಾಧವ್ ನಟಿಸಲಿದ್ದಾರೆ.
(ಚಿತ್ರ ಕೃಪೆ: ಗೌತಮಿ ಜಾಧವ್/ಇನ್‌ಸ್ಟಾಗ್ರಾಂ)
ಈ ಹಿಂದೆ ಗೌತಮಿ ಜಾಧವ್ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಆದರೆ ಆ ಚಿತ್ರಗಳು ಅಷ್ಟಾಗಿ ಜನಪ್ರಿಯತೆ ಪಡೆದುಕೊಂಡಿರಲಿಲ್ಲ. ಆ ಬಳಿಕ ಕಿರುತೆರೆಯಲ್ಲಿ ಸಕ್ರಿಯರಾದ ಗೌತಮಿ ಸತ್ಯ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಈಗ ಮತ್ತೆ ಬೆಳ್ಳಿತೆರೆಗೆ ಮರಳಿದ್ದಾರೆ.
(ಚಿತ್ರ ಕೃಪೆ: ಗೌತಮಿ ಜಾಧವ್/ಇನ್‌ಸ್ಟಾಗ್ರಾಂ)
Visual Story | ಗುಲಾಬಿ ಸೀರೆಯಲ್ಲಿ ಕಂಗೊಳಿಸಿದ ನಟಿ ಗೌತಮಿ ಜಾಧವ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
ನಟಿ ಗೌತಮಿ ಜಾಧವ್ ಅವರು, ಇನ್‌ಸ್ಟಾಗ್ರಾಮ್‌ನಲ್ಲಿ 4 ಚಿತ್ರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಗುಲಾಬಿ ಬಣ್ಣದ ಸೀರಿಯಲ್ಲಿ ಅಂದವಾಗಿ ಕಂಗೊಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಚಿತ್ರಗಳಲ್ಲಿ ಗೌತಮಿ ಗುಲಾಬಿ ಬಣ್ಣದ ಸೀರೆ ತೊಟ್ಟಿದ್ದಾರೆ. ಕೈಯಲ್ಲಿ ಹಸಿರು ಬಣ್ಣದ ಬಳೆಗಳು, ಕೊರಳಿಗೆ ಕೆಂಪು ಮತ್ತು ಹಸಿರು ಬಣ್ಣದ ಸರ ಧರಸಿ ಮಿಂಚಿದ್ದಾರೆ.
(ಚಿತ್ರ ಕೃಪೆ: ಗೌತಮಿ ಜಾಧವ್/ಇನ್‌ಸ್ಟಾಗ್ರಾಂ)