ಮಕ್ಕಳಿಗೆ ಈ ಲಕ್ಷಣಗಳಿದ್ದರೆ ಅಡಿನಾಯ್ಡ್ ಆಗಿರಬಹುದು..

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಚಿಕ್ಕ ಮಕ್ಕಳು ಪದೇ ಪದೇ ಉಷಾರು ತಪ್ಪುವುದು ಸಹಜ. ಹವಾಮಾನ ಹಾಗೂ ಆಹಾರದಲ್ಲಿ ಬದಲಾವಣೆ ಮಕ್ಕಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಪದೇ ಪದೇ ಜ್ವರ, ಮೂಗು ಕಟ್ಟಿಕೊಳ್ಳುವುದು ಹಾಗೂ ನೆಗಡಿ ಅಡಿನಾಯ್ಡ್ ಹೆಚ್ಚಳ ಆಗಿರಬಹುದು. ಅಡಿನಾಯ್ಡ್ ಎಂಬುದು ಮೂಗಿನ ಹಿಂಭಾಗದಲ್ಲಿರುವ ರಕ್ಷಣ ವ್ಯವಸ್ಥೆಯ ಒಂದು ಭಾಗವಾಗಿದೆ. ಇದರ ಗಾತ್ರ ಹೆಚ್ಚಾದಾಗ ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ.  ಇದರ ಲಕ್ಷಣಗಳು ಹೀಗಿವೆ.

|

ಚಿತ್ರ ಕೃಪೆ: ಗೆಟ್ಟಿ ಚಿತ್ರ

ಬಾಯಿಂದ ಉಸಿರಾಟ:  ಅಡಿನಾಯ್ಡ್ ಇರುವ ಮಗು ಬಾಯಿಯ ಮೂಲಕ ಉಸಿರಾಡುತ್ತದೆ. ಈ ಸಂದರ್ಭದಲ್ಲಿ ಮಗು ಸದಾ ಬಾಯಿಯಿಂದಲೇ ಉಸಿರಾಡುತ್ತದೆ. ಇದರಿಂದ ಬಾಯಿ, ಗಂಟಲು ಒಣಗುತ್ತದೆ. ಅಲ್ಲದೇ ಬಾಯಿಯ ಕೆಟ್ಟ ವಾಸನೆಗೂ ಕಾರಣವಾಗಬಹುದು.

|

ಚಿತ್ರ ಕೃಪೆ: ಗೆಟ್ಟಿ ಚಿತ್ರ

ಗೊರಕೆ ಹೊಡೆಯುವುದು: ಮಕ್ಕಳು ಗೊರಕೆ ಹೊಡೆಯುವುದು ಅಡಿನಾಯ್ಡ್ ದಪ್ಪವಾಗಿರುವ ಸೂಚಕವಾಗಿದೆ. ಇದರಿಂದ ಶ್ವಾಸಕೋಶಕ್ಕೆ ಗಾಳಿಯ ಹರಿವು ಸರಿಯಾಗಿ ಆಗದೆ ಶಬ್ದ ಉಂಟಾಗುತ್ತದೆ. 

|

ಚಿತ್ರ ಕೃಪೆ: ಗೆಟ್ಟಿ ಚಿತ್ರ

ನಿದ್ದೆಯ ತೊಂದರೆ: ನಿದ್ದೆ ಮಾಡುವಾಗ ಅತಿಯಾಗಿ ಬೆವರುವುದರಿಂದ ಎಚ್ಚರವಾಗುವುದು. ಮಕ್ಕಳು ನಿದ್ರಾಹೀನತೆಗೆ ಒಳಗಾದರೆ ಮಿದುಳಿನ ಬೆಳವಣಿಗೆ, ನೆನಪಿನ ಶಕ್ತಿ ಕೊರತೆ ಹಾಗೂ ಕಲಿಕೆಯ ಸಾಮರ್ಥ್ಯದ ಪ್ರಭಾವ ಬೀರುತ್ತದೆ.

|

ಚಿತ್ರ ಕೃಪೆ: ಗೆಟ್ಟಿ ಚಿತ್ರ

ಕಿವಿನೋವು: ಈ ಸಮಸ್ಯೆ ಇರುವ ಮಕ್ಕಳು ಮೂಗಿನ ಧ್ವನಿಯಲ್ಲಿ ಮಾತನಾಡುತ್ತಾರೆ. ಇವರಿಗೆ ಕಿವಿ ಸೋಂಕು ಕಾಣಿಸಿಕೊಳ್ಳಬಹುದು. ಮಗುವಿಗೆ ಸರಿಯಾಗಿ ಕಿವಿ ಕೇಳದಿರುವ ಸಾಧ್ಯತೆಯೂ ಇದೆ.

|

ಚಿತ್ರ ಕೃಪೆ: ಗೆಟ್ಟಿ ಚಿತ್ರ

ಆಹಾರ ಸೇವನೆಗೆ ಅಡ್ಡಿ: ಆಹಾರವನ್ನು ನಿಧಾನವಾಗಿ ಸೇವಿಸುವುದು, ಊಟ ಮಾಡಲು ಆಸಕ್ತಿ ತೋರದಿರುವ ಕಂಡುಬರುತ್ತದೆ. ಇದರಿಂದಾಗಿ ಮಕ್ಕಳಲ್ಲಿ ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ. 

|

ಚಿತ್ರ ಕೃಪೆ: ಗೆಟ್ಟಿ ಚಿತ್ರ

ಅಡಿನಾಯ್ಡ್ ಮುಖ: ಧೀರ್ಘಕಾಲದಲ್ಲಿ ಅಡಿನಾಯ್ಡ್ ಹೆಚ್ಚಾದಂತೆ ಮುಖದಲ್ಲಿ ಬದಲಾವಣೆಯಾಗುತ್ತದೆ. ಮುಖ ಉದ್ದವಾಗುವುದು, ಬಾಯಿ ಸದಾ ತೆರೆದಿರುವುದು, ಹಲ್ಲುಗಳ ಅಸಮರ್ಪಕ ಜೋಡಣೆ ಹೀಗೆ ಹಲವು ಲಕ್ಷಣಗಳು  ಕಂಡುಬರುತ್ತವೆ. 

|

ಚಿತ್ರ ಕೃಪೆ: ಗೆಟ್ಟಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.