ಪ್ರಜಾವಾಣಿ ವೆಬ್ ಡೆಸ್ಕ್
ಹವಾಮಾನ ಬದಲಾದಂತೆ ದೇಹವೂ ಅದಕ್ಕೆ ಒಗ್ಗಿಕೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ ಸೋಂಕುಗಳು ಕಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಕಿತ್ತಳೆ ಹಣ್ಣು ದೇಹವನ್ನು ಆರೋಗ್ಯವಾಗಿಡಲು ಸಹಾಯಕ. ಇದರಲ್ಲಿರುವ ವಿಟಮಿನ್ ಸಿ ವೈರಾಣುಗಳಿಂದ ರಕ್ಷಿಸುತ್ತದೆ.
ವಿಟಮಿನ್ ಸಿ ಹೇರಳವಾಗಿರುವ ಪೇರಲೆ ಹಣ್ಣು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ.
ಫೈಬರ್, ವಿಟಮಿನ್ ಸಿ ತುಂಬಿರುವ ಕಿವಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ ಶ್ವಾಸಕೋಶದ ಆರೋಗ್ಯಕ್ಕೂ ಒಳಿತು.
ದಾಳಿಂಬೆ ಹಣ್ಣಿನ ಸೇವನೆಯಿಂದ ದೇಹಕ್ಕೆ ಹೊರಗಿನಿಂದ ವೈರಾಣುಗಳು ಬರದಂತೆ ತಡೆಯುತ್ತದೆ. ಹೀಗಾಗಿ ದೇಹಕ್ಕೆ ಸೋಂಕು ಕಾಡದು.
ಸೇಬು ಹಣ್ಣಿನಲ್ಲಿರುವ ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಪಪ್ಪಾಯ ಜೀರ್ಣಕ್ರಿಯೆಯನ್ನು ಸುಧಾರಿಸಿ ದೇಹಕ್ಕೆ ಬೇಕಾದ ಶಕ್ತಿ ಉತ್ಪಾದನೆಯಾಗುವಂತೆ ಮಾಡುತ್ತದೆ. ಜತೆಗೆ ಋತುಮಾನ ಸೋಂಕುಗಳಿಂದ ದೇಹವನ್ನು ರಕ್ಷಿಸುತ್ತದೆ.
ಚಳಿಗಾಲದಲ್ಲಿ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಮತ್ತು ಸುಸ್ತು ಕಾಡದಂತೆ ಕಾಪಾಡಿಕೊಳ್ಳಲು ಬ್ಲ್ಯೂಬೆರಿ ಹಣ್ಣು ಒಳಿತು.
ಚಳಿಗಾಲದಲ್ಲಿ ದೇಹ ಅನಾರೋಗ್ಯಕ್ಕೀಡಾಗದಂತೆ ಸ್ಟ್ರಾಬೆರಿ ನೋಡಿಕೊಳ್ಳುತ್ತದೆ. ಜತೆಗೆ ಚರ್ಮದ ಆರೋಗ್ಯವನ್ನು ಉತ್ತಮವಾಗಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.