ಪ್ರಜಾವಾಣಿ ವೆಬ್ ಡೆಸ್ಕ್
ಮಿದುಳು ದೇಹದ ಅತ್ಯಂತ ಶಕ್ತಿಶಾಲಿ ಅಂಗಗಳಲ್ಲಿ ಒಂದು. ಇತರೆ ಅಂಗಗಳಂತೆ ಮಿದುಳಿಗೂ ನಿಯಮಿತ ವ್ಯಾಯಾಮ, ಆರೈಕೆ ಬೇಕು. ಈ ಅಭ್ಯಾಸಗಳಿಂದ ಸ್ಮರಣ ಶಕ್ತಿ ಮತ್ತು ಬೌದ್ಧಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಬಹುದಾಗಿದೆ.
ಚಿತ್ರ: ಗೆಟ್ಟಿ
ನಿತ್ಯ ಓದುವ ಅಭ್ಯಾಸ: ಪುಸ್ತಕ ಓದುವುದರಿಂದ ಮಿದುಳಿಗೆ ವ್ಯಾಯಾಮವಾಗಿದೆ. ಪುಸ್ತಕ, ಪತ್ರಿಕೆ ಮತ್ತು ಲೇಖನಗಳನ್ನು ಓದುವುದರಿಂದ ಚಿಂತನಾಶೀಲತೆ ಮತ್ತು ಕಲ್ಪನಾಶಕ್ತಿ ಹೆಚ್ಚಾಗುತ್ತದೆ. ಪ್ರತಿದಿನ ಕನಿಷ್ಠ 60 ನಿಮಿಷ ಓದುವ ಅಭ್ಯಾಸ ಒಳ್ಳೆಯದು.
ಧ್ಯಾನ ಮತ್ತು ಯೋಗ: ಪ್ರತಿದಿನ 10 ರಿಂದ 15 ನಿಮಿಷಗಳ ಧ್ಯಾನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ. ಧ್ಯಾನವು ಮಿದುಳಿನ ರಚನೆಯಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುತ್ತದೆ.
ಹೊಸ ಕೌಶಲ್ಯಗಳನ್ನು ಕಲಿಕೆ: ಹೊಸ ಭಾಷೆ ಕಲಿಯುವುದು, ಸಂಗೀತ ವಾದ್ಯವನ್ನು ನುಡಿಸುವುದು, ಚಿತ್ರಕಲೆ, ನೃತ್ಯ ಅಥವಾ ಹೊಸ ಹವ್ಯಾಸದಿಂದ ಮಿದುಳಿನಲ್ಲಿ ಹೊಸ ನರಮಾರ್ಗಗಳು ಸೃಷ್ಟಿಯಾಗುತ್ತವೆ.
ದೈಹಿಕ ವ್ಯಾಯಾಮ: ದೈಹಿಕ ಚಟುವಟಿಕೆಯು ಮಿದುಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳ ಹರಿವನ್ನು ಹೆಚ್ಚಿಸುತ್ತದೆ. ಪ್ರತಿದಿನ 30 ನಿಮಿಷಗಳ ಸರಳ ನಡಿಗೆ, ಯೋಗ, ಈಜು ಮಿದುಳಿನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.
ಆರೋಗ್ಯಕರ ಆಹಾರ ಮತ್ತು ನಿದ್ದೆ: ಹಣ್ಣು, ತರಕಾರಿ, ಒಣಹಣ್ಣು, ಮೀನು ಮತ್ತು ಧಾನ್ಯಗಳನ್ನು ಸೇವಿಸುವುದರಿಂದ ಮಿದುಳಿಗೆ ಅಗತ್ಯವಾದ ಪೋಷಕಾಂಶಗಳು ಸಿಗುತ್ತವೆ. ದಿನಕ್ಕೆ 7 ರಿಂದ 8 ಗಂಟೆಗಳ ಗುಣಮಟ್ಟದ ನಿದ್ದೆ ಮಾಡುವುದರಿಂದ ಮಿದುಳಿನ ದುರಸ್ತಿಗೆ ಸಹಾಯಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.