ಮಕ್ಕಳಲ್ಲಿನ ಬೊಜ್ಜಿಗೆ ಕಾರಣವೇನು? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಬೊಜ್ಜು ದೇಹದ ಅಧಿಕ ತೂಕವಾಗಿದೆ. ಇದನ್ನು ಬಾಡಿ ಮಾಸ್ ಇಂಡೆಕ್ಸ್‌ ನೊಂದಿಗೆ ಅಳೆಯಲಾಗುತ್ತದೆ. ಇತ್ತೀಚೆಗೆ ಚಿಕ್ಕಮಕ್ಕಳಲ್ಲಿ ಹೆಚ್ಚು ಬೊಜ್ಜು ಸಂಗ್ರಹವಾಗುತ್ತಿದೆ. ಬಾಡಿ ಮಾಸ್ ಇಂಡೆಕ್ಸ್‌ನ ಅಳತೆ ಶೇ 95ಕ್ಕಿಂತ ಅಧಿಕವಾಗಿದ್ದರೆ ಬೊಜ್ಜು ಎಂದೂ, ಶೇ 85ಕ್ಕಿಂತ ಹೆಚ್ಚಿದ್ದರೆ ಅಧಿಕ ತೂಕ ಎಂದು ಪರಿಗಣಿಸಲಾಗುತ್ತದೆ. 

|

ಚಿತ್ರ ಕೃಪೆ: ಗೆಟ್ಟಿ

ಹೆಚ್ಚುವರಿ ಕ್ಯಾಲೋರಿಗಳಿರುವ ಆಹಾರಗಳನ್ನು ಸೇವನೆ ಮಾಡಿದಾಗ ದೈಹಿಕ ಚಟುವಟಿಕೆಗಳನ್ನು ಮಾಡದಿರುವುದು ಬೊಜ್ಜಿಗೆ ಪ್ರಮುಖ ಕಾರಣವಾಗಿದೆ. ಇದು ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತದೆ. ಇದರಿಂದಾಗಿ ದೇಹ ಹಿಗ್ಗುತ್ತದೆ ಜತೆಗೆ ಹೊಸ ಕೊಬ್ಬಿನ ಕೋಶ ರಚನೆಯಾಗುತ್ತದೆ.

|

ಚಿತ್ರ ಕೃಪೆ: ಗೆಟ್ಟಿ

ವಿಸ್ತರಿಸಿದ ಕೊಬ್ಬಿನ ಕೋಶಗಳು ಲೆಪ್ಟಿನ್ ಕಿಣ್ವ, ಇನ್ಸುಲಿನ್, ಗ್ರೆಲಿನ್ ಹಾಗೂ ಕಾರ್ಟಿಸೋಲ್ ಅನ್ನು ಬಿಡುಗಡೆ ಮಾಡುತ್ತವೆ. ಇದರಿಂದ ಹಾರ್ಮೋನುಗಳ ಅಸಮತೋಲನವುಂಟಾಗುತ್ತದೆ. ಇದರಿಂದಾಗಿ ಹೊಟ್ಟೆ, ತೊಡೆ ಸೇರಿದಂತೆ ಇತರೆ ಭಾಗದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. 

|

ಚಿತ್ರ ಕೃಪೆ: ಗೆಟ್ಟಿ

ದೇಹದಲ್ಲಿ ಕಾರ್ಟಿಸೋಲ್ ಮಟ್ಟ ಹೆಚ್ಚಾಗಿ ಕೊಬ್ಬಿನ ಅಂಶ ಶೇಖರಣೆಯಾಗುತ್ತದೆ      .

|

ಚಿತ್ರ ಕೃಪೆ: ಗೆಟ್ಟಿ

ಪ್ರತಿರಕ್ಷಣಾ ಕೋಶಗಳು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗುವ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ ಮತ್ತು ಹೆಚ್ಚಿನ ಕೊಬ್ಬಿನಾಂಶ ಶೇಖರಣೆಯಾಗುವಂತೆ ಮಾಡುತ್ತದೆ.

|

ಚಿತ್ರ ಕೃಪೆ: ಗೆಟ್ಟಿ

ಇನ್ಸುಲಿನ್ ಪ್ರತಿರೋಧ ಮತ್ತು ಕರುಳಿನಲ್ಲಿ ಸೂಕ್ಷ್ಮಾಣುಗಳ ಅಸಮತೋಲನದಿಂದ ದೀರ್ಘಕಾಲದ ಉರಿಯೂತ ಕಾಣಿಸಿಕೊಳ್ಳುತ್ತದೆ. ಇದು ಹಸಿವನ್ನು ಹೆಚ್ಚಿಸಿ, ಕೊಬ್ಬು ಶೇಖರಣೆಯಾಗುವಂತೆ ಮಾಡುತ್ತದೆ.

|

ಚಿತ್ರ ಕೃಪೆ: ಗೆಟ್ಟಿ

ಸಂಸ್ಕರಿಸಿದ ಆಹಾರ ಮತ್ತು ಅಧಿಕ ಕ್ಯಾಲೋರಿ ಆಹಾರಗಳ ಅತಿಯಾದ ಸೇವನೆ,
ಮೊಬೈಲ್, ಟಿವಿಯ ಅತಿಯಾದ ಬಳಕೆ, ಮತ್ತು ದೈಹಿಕ ವ್ಯಾಯಾಮ ಮಾಡದಿರುವುದು.
ಆನುವಂಶಿಕತೆ, ಡಿಜಿಟಲ್ ಮಾಧ್ಯಮ ಪ್ರಭಾವ ಮತ್ತು ಸಾಮಾಜಿಕ ಒತ್ತಡಗಳು ಬೊಜ್ಜಿಗೆ ಕಾರಣವಾಗಿದೆ. 

|

ಚಿತ್ರ ಕೃಪೆ: ಗೆಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.