ಪ್ರಜಾವಾಣಿ ವೆಬ್ ಡೆಸ್ಕ್
ಡೆಲಿರಿಯಮ್, ಮಾನಸಿಕ ಸ್ಥಿತಿಯಲ್ಲಿ ಉಂಟಾಗುವ ಗೊಂದಲ, ದಿಗ್ಧಮೆ ಅಥವಾ ಮಿದುಳಿನ ಕಾರ್ಯದಲ್ಲಿ ಹಠಾತ್ ಬದಲಾವಣೆಯಾಗಿದೆ. ಇದು ಕೆಲವು ಗಂಟೆಗಳಿಂದ ದಿನಗಳವರೆಗೆ ಭಾದಿಸಬಹುದು. ಡೆಲಿರಿಯಮ್‌ನ ಲಕ್ಷಣ ಹೀಗಿವೆ.
ಚಿತ್ರ: ಗೆಟ್ಟಿ
ಅರಿವಿನ ಬದಲಾವಣೆಗಳು: ವ್ಯಕ್ತಿಯು ಗೊಂದಲಕ್ಕೊಳಗಾಗುತ್ತಾನೆ. ತನ್ನ ಸುತ್ತಮುತ್ತಲಿನ ಪರಿಸರವನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುತ್ತಾನೆ. ಗಮನವನ್ನು ಕೇಂದ್ರೀಕರಿಸಲು ಅಸಮರ್ಥನಾಗುತ್ತಾನೆ.
ಗ್ರಹಿಕೆಯ ಅಸ್ವಸ್ಥತೆ: ಭ್ರಮೆ ಅಥವಾ ತಪ್ಪು ಗ್ರಹಿಕೆ ಉಂಟಾಗುತ್ತವದೆ. ವ್ಯಕ್ತಿ ವಾಸ್ತವ ಮತ್ತು ಕಲ್ಪನೆಯ ನಡುವೆ ವ್ಯತ್ಯಾಸ ಗುರುತಿಸಲು ಸಾಧ್ಯವಾಗುವುದಿಲ್ಲ.
ಚಿತ್ರ: ಗೆಟ್ಟಿ
ನಡವಳಿಕೆಯ ಬದಲಾವಣೆಗಳು: ಅಶಾಂತಿ, ಆತಂಕ, ಭಯ, ಅಥವಾ ಆಳವಾದ ನಿದ್ದೆ ಕಂಡುಬರಬಹುದು. ಮಾತಿನಲ್ಲಿ ಅಸಂಗತತೆ, ಬೆರಗು ಮತ್ತು ಭಾವನಾತ್ಮಕ ಏರು ಪೇರುಗಳ ಸಾಧ್ಯತೆ ಇರುತ್ತದೆ.
ಚಿತ್ರ: ಗೆಟ್ಟಿ
ನಿದ್ದೆಯ ಚಕ್ರಕ್ಕೆ ಅಡಚಣೆ: ಹಗಲು ಹೆಚ್ಚು ನಿದ್ದೆ, ರಾತ್ರಿ ಅಶಾಂತಿ, ಆಗಾಗ ಎಚ್ಚರವಾಗುವುದು.
ಚಿತ್ರ: ಗೆಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.