ಗರ್ಭಿಣಿಯರಿಗೆ ಮಧುಮೇಹ ಬರಲು ಕಾರಣಗಳಿವು...

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಗರ್ಭಾವಸ್ಥೆಯಲ್ಲಿ ಮಧುಮೇಹ ಬಂದರೆ ತಾಯಿ ಹಾಗೂ ಮಗುವಿಗೆ ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಗರ್ಭಾವಸ್ಥೆಯ ಮಧುಮೇಹ ಮೆಲ್ಲಿಟಸ್ (ಜಿಡಿಎಂ) ಮಧುಮೇಹದ ಒಂದು ರೂಪವಾಗಿದ್ದು, ಹಾರ್ಮೋನ್‌ಗಳ ವೈಪರೀತ್ಯದಿಂದಾಗಿ ಇನ್ಸುಲಿನ್ ಉತ್ಪಾದನೆಗೆ ಅಡ್ಡಿಯಾಗುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣವು ತೀವ್ರಗತಿಯಲ್ಲಿ ಹೆಚ್ಚುತ್ತದೆ.

|

ಚಿತ್ರ: ಗೆಟ್ಟಿ

ಗರ್ಭಿಣಿಯರಿಗೆ ಯಾವುದೇ ಹಂತದಲ್ಲಿ ಮಧುಮೇಹ ಉಂಟಾಗುವ ಸಾಧ್ಯತೆ ಇರುತ್ತದೆ. ಹೃದ್ರೋಗ, ಅಧಿಕ ರಕ್ತದ ಒತ್ತಡ, ಬೊಜ್ಜು, ಗರ್ಭಧಾರಣೆಗೂ ಮೊದಲು ಅಧಿಕ ತೂಕ, ಆನುವಂಶಿಕತೆ  ಪಿಸಿಒಎಸ್, ತಾಯಿಯ ವಯಸ್ಸು  ಇವುಗಳೆಲ್ಲವೂ ಕಾರಣವಾಗಬಹುದು.

|

ಚಿತ್ರ: ಗೆಟ್ಟಿ

ಸಮರ್ಪಕವಾಗಿ ಚಿಕಿತ್ಸೆ ಸಿಗದೇ ಇದ್ದರೆ ಗರ್ಭಿಣಿ ಹಾಗೂ ಮಗುವಿಗೆ ಏಕಕಾಲಕ್ಕೆ ಹಲವು ಆರೋಗ್ಯ ತೊಂದರೆಗಳು ಉಂಟಾಗಬಹುದು.  ರಕ್ತದೊತ್ತಡ ಹೆಚ್ಚಿ, ಅಕಾಲದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಬೇಕಾಗುತ್ತದೆ.

|

ಚಿತ್ರ: ಗೆಟ್ಟಿ

ಅತಿ ತೂಕದ ಮಗು ಜನಿಸಬಹುದು. ಇದರಿಂದ ಮಗುವಿಗೂ ಹಲವು ತರಹದ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಜತೆಗೆ ಶಿಶುವಿಗೆ ಉಸಿರಾಟದ ತೊಂದರೆ, ರಕ್ತದಲ್ಲಿ ಸಕ್ಕರೆ ಪ್ರಮಾಣ ಕುಸಿಯವ ಸ್ಥಿತಿ ಟೈಪ್ 2 ಮಧುಮೇಹದ ಅಪಾಯಗಳು ಬರಬಹುದು.

|

ಚಿತ್ರ: ಗೆಟ್ಟಿ

ಗರ್ಭಿಣಿಯರಲ್ಲಿ ಮಧುಮೇಹ ಉಂಟಾದರೆ ಸ್ಪಷ್ಟ ಲಕ್ಷಣಗಳು ಕಾಣಿಸದೇ ಇರಬಹುದು. ಆಗಾಗ್ಗೆ ಮೂತ್ರ ವಿಸರ್ಜನೆ, ಅತಿಯಾದ ಬಾಯಾರಿಕೆ ಹಾಗೂ ಸುಸ್ತು, ವಾಕರಿಕೆ ಇವುಗಳು ಮಧುಮೇಹದ ಪ್ರಮುಖ ಲಕ್ಷಣಗಳಾಗಿವೆ. 

|

ಚಿತ್ರ: ಗೆಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.