ಪ್ರಜಾವಾಣಿ ವೆಬ್ ಡೆಸ್ಕ್
ತಲೆಗೂದಲು ಉದುರುವುದು ಇತ್ತೀಚೆಗೆ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಈ ಸಮಸ್ಯೆ ಪುರುಷರಲ್ಲಿ ಮಾತ್ರವಲ್ಲದೆ ಮಹಿಳೆಯರಲ್ಲೂ ಕಾಣಿಸುತ್ತಿದೆ. ಪ್ರತಿ ದಿನ ಕೂದಲು ಉದುರಲು ಆರಂಭಿಸಿದರೆ, ಕೆಲವೇ ತಿಂಗಳುಗಳಲ್ಲಿ ತಲೆ ಬೋಳಗಬಹುದು. ನಿತ್ಯ 50 ರಿಂದ 100 ಕೂದಲಿಗಿಂತ ಹೆಚ್ಚು ಉದುರಿದರೆ, ಅದು ಸಮಸ್ಯೆ ಎನಿಸಿಕೊಳ್ಳುತ್ತದೆ.
ಚಿತ್ರ ಕೃಪೆ: ಗೆಟ್ಟಿ
ಮೆಂತ್ಯಸೊಪ್ಪು, ಕರಿಬೇವು, ದಾಸವಾಳ ಎಲೆ ಹಾಗೂ ಹೂ ಸಮಪ್ರಮಾಣದಲ್ಲಿ ತೆಗೆದುಕೊಳ್ಳಿ. ಸ್ವಲ್ಪ ತುಳಸಿ, ಲೋಳೆಸರವನ್ನೂ ಸೇರಿಸಿಕೊಂಡು ರುಬ್ಬಿ. ಈ ಮಿಶ್ರಣಕ್ಕೆ ಅರ್ಧ ಹೋಳು ನಿಂಬೆರಸ ಸೇರಿಸಿ ಕಲಸಿ ಕೂದಲಿನ ಬುಡಕ್ಕೆ ಹಚ್ಚಿ. 2 ರಿಂದ 3 ಗಂಟೆ ಬಿಟ್ಟು ತೊಳೆದುಕೊಳ್ಳಿ.
ಚಿತ್ರ ಕೃಪೆ: ಗೆಟ್ಟಿ
ಮೆಹೆಂದಿಪುಡಿ, ತುಳಸಿಪುಡಿ, ಮೆಂತ್ಯಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ನಿಂಬೆರಸ ಸೇರಿಸಿ, ಸ್ವಲ್ಪ ನೀರು ಹಾಕಿ ಕಲಸಿ ಲೇಪನವನ್ನು ತಯಾರಿಸಿ. ಮೆಹೆಂದಿ ಬಣ್ಣ ಬೇಡದಿದ್ದಲ್ಲಿ ಬಾದಾಮಿ ಎಣ್ಣೆ ಸೇರಿಸಬಹುದು. ಕೂದಲಿನ ಬುಡದಿಂದ ಕೊನೆಯವರೆಗೂ ಲೇಪಿಸಿ 2-3 ಗಂಟೆಗಳ ನಂತರ ತೊಳೆದುಕೊಳ್ಳಿ.
ಚಿತ್ರ ಕೃಪೆ: ಗೆಟ್ಟಿ
ಕೊಬ್ಬರಿಎಣ್ಣೆಯಿಂದ ಕೂದಲಿನ ಬುಡಕ್ಕೆ ಚೆನ್ನಾಗಿ ಇಳಿಯುವ ಆಗೆ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಸಾಜ್ ಮಾಡಿರಿ. ತಲೆಗೂದಲಿಗೂ ಹಚ್ಚಬಹುದು. ಇದು ಕೂದಲು ಬಲವಾಗಲು ಸಹಕಾರಿಯಾಗಿದೆ.
ಚಿತ್ರ ಕೃಪೆ: ಎಐ
ಲೋಳೆಸರ ಅಥವಾ ಈರುಳ್ಳಿ ರಸದ ಲೇಪನವನ್ನು ತಲೆಗೆ ಹಚ್ಚಬೇಕು. ಒಂದು ಗಂಟೆಯ ನಂತರ ತೊಳೆಯಬಹುದು. ಇದು ಕೂದಲ ಬುಡವನ್ನು ಗಟ್ಟಿಗೊಳಿಸುತ್ತದೆ.
ಚಿತ್ರ ಕೃಪೆ: ಗೆಟ್ಟಿ
ಮೆಂತ್ಯ ಕಾಳನ್ನು ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ಅರೆದು ತಲೆಗೆ ಲೇಪಿಸಿ, ಒಂದು ಗಂಟೆಯ ನಂತರ ತೊಳೆದುಕೊಳ್ಳಿ. ತೆಂಗಿನಕಾಯಿ ತುರಿಯನ್ನು ರುಬ್ಬಿ ಹಾಲನ್ನು ತೆಗೆದು ಕೂದಲಿನ ಬುಡಕ್ಕೆ ಲೇಪಿಸಿ ಒಂದು ಗಂಟೆಯ ನಂತರ ತೊಳೆಯಿರಿ.
ಚಿತ್ರ ಕೃಪೆ: ಗೆಟ್ಟಿ
ಮೊಳಕೆ ಬಂದ ಅಗಸೆ ಕಾಳುಗಳ ಸೇವನೆಯು ದೇಹಕ್ಕೆ ಅತ್ಯಗತ್ಯವಾದ ಒಮೇಗ- 3 ಕೊಬ್ಬಿನಾಮ್ಲವನ್ನು ಒದಗಿಸಿ ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸುತ್ತದೆ. ತಣ್ಣೀರು ಅಥವಾ ಉಗುರುಬೆಚ್ಚಗಿನ ನೀರಿನಲ್ಲಿ ತಲೆಸ್ನಾನ ಮಾಡುವುದು ಒಳ್ಳೆಯದು.
ಚಿತ್ರ ಕೃಪೆ: ಗೆಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.