ಪ್ರಜಾವಾಣಿ ವೆಬ್ ಡೆಸ್ಕ್
ನೆನೆಸಿಟ್ಟ ಒಣ ದ್ರಾಕ್ಷಿ ಸೇವಿಸುವುದರಿಂದ ಆರೋಗ್ಯಕ್ಕೆ ಹತ್ತಾರು ಲಾಭಗಳಿವೆ ಎಂದು ವೈದ್ಯರು ಹೇಳುತ್ತಾರೆ. ದ್ರಾಕ್ಷಿ ವಿಟಮಿನ್ ಹಾಗೂ ಫೈಬರ್ ಅಂಶಗಳಿಂದ ಸಮೃದ್ದವಾಗಿರುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಿ ರಕ್ತಹೀನತೆ ಸರಿದೂಗಿಸುತ್ದದೆ.
ಚಿತ್ರ ಕೃಪೆ: ಗೆಟ್ಟಿ ಚಿತ್ರ
ಜೀರ್ಣಕ್ರಿಯೆಗೆ ಸಹಕಾರಿ: ದ್ರಾಕ್ಷಿಯಲ್ಲಿ ನಾರಿನಾಂಶ ಅಧಿಕವಾಗಿರುತ್ತದೆ. ಇದು ಆಹಾರವನ್ನು ಜೀರ್ಣವಾಗಿಸಲು ಸಹಕಾರಿಯಾಗಿದೆ. ಅಲ್ಲದೇ ಮಲಬದ್ದತೆಯನ್ನು ಪರಿಹಾರ ಮಾಡುತ್ತದೆ.
ಚಿತ್ರ ಕೃಪೆ: ಗೆಟ್ಟಿ ಚಿತ್ರ
ರಕ್ತಹೀನತೆ ನಿವಾರಣೆ: ದ್ರಾಕ್ಷಿಯಲ್ಲಿ ಪ್ರಮುಖವಾಗಿ ಕಬ್ಬಿಣಾಂಶ ಸಮೃದ್ದವಾಗಿರುತ್ತದೆ. ಜತೆಗೆ ಬಿ-ಕಾಂಪ್ಲೆಕ್ಸ್ ವಿಟಮಿನ್‌ಗಳು ಅಧಿಕವಾಗಿದ್ದು, ಇವು ಕೆಂಪು ರಕ್ತಕಣಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ಚಿತ್ರ ಕೃಪೆ: ಗೆಟ್ಟಿ ಚಿತ್ರ
ರೋಗನಿರೋಧಕ ಶಕ್ತಿ ಹೆಚ್ಚಳ: ಪ್ರಮುಖವಾಗಿ ಆಂಟಿಆಕ್ಸಿಡೆಂಟ್‌ಗಳು ದೇಹದ ರೋಗನಿರೋಧಕ ಶಕ್ತಿಗೆ ಬಲ ನೀಡುತ್ತದೆ. ದೇಹವನ್ನು ಆನಾರೋಗ್ಯದಿಂದ ರಕ್ಷಿಸಲು ಸಹಕಾರಿಯಾಗಿದೆ.
ಚಿತ್ರ ಕೃಪೆ: ಗೆಟ್ಟಿ ಚಿತ್ರ
ಹೃದಯದ ಆರೋಗ್ಯಕ್ಕೆ ಸಹಕಾರಿ: ಒಣ ದ್ರಾಕ್ಷಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೂ ಸಹಕಾರಿಯಾಗಿದೆ. ಇದು ಹೃದಯದಲ್ಲಿ ರಕ್ತ ಪರಿಚಲನೆ ಸರಾಗವಾಗಿ ನಡೆಯಲು ಸಹಕಾರಿಯಾಗಿದೆ ಜತೆಗೆ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.
ಚಿತ್ರ ಕೃಪೆ: ಗೆಟ್ಟಿ ಚಿತ್ರ
ಮೂಳೆಗಳ ಬಲವರ್ಧನೆ: ದ್ರಾಕ್ಷಿಯಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಕೆಗಳು ಸಮೃದ್ದವಾಗಿರುತ್ತವೆ. ಇವು ಮೂಳೆ ಬಲಗೊಳ್ಳಲು ಸಹಕಾರಿಯಾಗಿವೆ ಎಂದು ವೈದ್ಯರು ಹೇಳುತ್ತಾರೆ.
ಚಿತ್ರ ಕೃಪೆ: ಗೆಟ್ಟಿ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.